ಏನೆಕಲ್ಲು: ಬಾನಡ್ಕ ಬೋಲಡ್ಕ ಸೈನಿಕ ರಸ್ತೆಯ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಏನೆಕಲ್ಲು ಗ್ರಾಮದ ಬಾನಡ್ಕ ಬೋಲಡ್ಕ ಸೈನಿಕ ರಸ್ತೆಯು ಸುಮಾರು 25 ಲಕ್ಷದಲ್ಲಿ ಕಾಂಕ್ರೀಟೀಕರಣ ಗೊಂಡಿದ್ದು ಇದರ ಉದ್ಘಾಟನೆಯು ಮಾ.6 ನಡೆಯಿತು. ಹಿರಿಯರಾದ ಶೂರಪ್ಪ ಗೌಡ ಬಾಲಾಡಿ ತೆಂಗಿನಕಾಯಿ ಒಡೆಯುವುದರ ಮೂಲಕ ಮತ್ತು ನಿವೃತ್ತ ಸುಬೇದಾರ್ ವಾಸುದೇವ ಗೌಡ ಬಾನಡ್ಕ ರಿಬ್ಬನ್ ಕತ್ತರಿಸಿ ರಸ್ತೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಏನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭವಾನಿ ಶಂಕರ್ ಪೂಂಬಾಡಿ, ಸುಬ್ರಹ್ಮಣ್ಯ ಗ್ರಾ. ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ನಡುತೋಟ , ಹಿರಿಯ ಕಾರ್ಯಕರ್ತರಾದ ಗಿರಿಯಪ್ಪ ಗೌಡ ಬಾಲಡಿ , ಪದ್ಮನಾಭ ಗೌಡ ಬಾಲಡಿ , ಅನ್ನೋಜಿ ಗೌಡ ಕಟ್ಟ,ಗಣಪತಿ ಕಟ್ಟ,ಮನೋಜ್ ಬಾನಡ್ಕ, ತೀರ್ಥೇ ಶ್ ಬಾನಡ್ಕ,ಕಾರ್ಯಪ್ಪ ಗೌಡ ಪೂಜಾರಿ ಮನೆ, ಕುಶಾಲಪ್ಪ ಗೌಡ ಪದ್ನಡ್ಕ, ಜಯರಾಮ ಸಂಪ್ಯಾಡಿ, ಮುರುಗಯ್ಯ ,ಅರಣ್ಯ ವೀಕ್ಷಕರಾದ ಲೋಕೇಶ್ ಐವರ್ನಾಡು, ಊರಿನ ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ, ದೇವಸ್ಥಾನ ಮತ್ತು ದೈವಸ್ಥಾನ ದ ಅಧ್ಯಕ್ಷರಾದ ನಾಗೇಶ್ ನೆಕ್ರಾಜೆ ,ಯೇನೇಕಲ್ ಹಾಲು ಸೊಸೈಟಿ ಯ ಅಧ್ಯಕ್ಷರಾದ ಭರತ್ ನೆಕ್ರಾಜೆ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ಮಾಧವ ಗೌಡ ಕತ್ಲಡ್ಕ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದಯಾನಂದ ಗೌಡ ಕುಕ್ಕಪ್ಪನ ಮನೆ ರಮೇಶ್ ಪದ್ನಡ್ಕ ಹಾಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಗೌಡ ಕೋಟಿ ಗೌಡನ ,ಮನೆ ಭವ್ಯ ಕುಮಾರಿ ಜೇನುಕೊಡಿ,ಪುಷ್ಪಲತಾ ಬೈರೋನಿ,ಶಿವರಾಮ ನೆಕ್ರಾಜೆ ,ಸೊಸೈಟಿ ನಿರ್ದೇಶಕರಾದ ಕಿರಣ್ ಕುಮಾರ್ ಮಾದನ ಮನೆ ಮಾಜಿ ನಿರ್ದೇಶಕರಾದ ಸುರೇಶ್ ನೆಕ್ರಾಜೆ, ಮತ್ತು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.