ಬೆಳ್ಳಾರೆ ಕೆಪಿಎಸ್ ಗೆ ಡಿಜಿಟಲ್ ಪರಿಕರಗಳ ಕೊಡುಗೆ

0

ಹೆವ್ಲೆಟ್ ಪ್ಯಾಕರ್ಡ್(HP) ಅವರು HP-ALFA (Accessible Learning For All) ಎಂಬ CSR ಉಪಕ್ರಮದ ಭಾಗವಾಗಿ TV, ಪ್ರಿಂಟರ್ ಆಂಡ್ರಾಯ್ಡ್ ಬಾಕ್ಸ್, ಲ್ಯಾಪ್‌ಟಾಪ್ (Chromebook) ನಂತಹ ಸಲಕರಣೆಗಳನ್ನು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕೊಡುಗೆಯಾಗಿ ನೀಡಿದರು, ಇದು ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆಗೆ ಪ್ರವೇಶವನ್ನು ಸುಧಾರಿಸುವ ಉಪಕ್ರಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ 25 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಇಂದು ಸಲಕರಣೆಯ ಹಸ್ತಾಂತರ ನಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಚಂದ್ರಶೇಖರ ಪನ್ನೆ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಅಧ್ಯಕ್ಷತೆ ವಹಿಸಿದರು. . HP-ALFA ದಕ್ಷಿಣ ವಲಯ ಸಂಯೋಜಕರಾದ ವಿಕಾಸ್ ಎಂ ಯೋಜನೆಯ ಕುರಿತು ಪ್ರಾಸ್ತಾವಿಕ ಮಾತನ್ನಾಡಿದರು. ವೇದಿಕೆಯಲ್ಲಿ ಕ್ಲಸ್ಟರ್ ಸಂಯೋಜಕರಾದ ಕಿಶೋರ್ ಕುಮಾರ್ , ಕೆಪಿಎಸ್ ಪ್ರಾಥಮಿಕ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಉಮಾಕುಮಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ಕಾರ್ಯಕ್ರಮ ನಿರೂಪಿಸಿ ದರು. ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.