ದ.ಕ.ಜಿಲ್ಲಾ ಮಟ್ಟದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಕಲರ್ಸ್ ಗಾರ್ಮೆಂಟ್ಸ್ ನ ಮಾಲಕಿ ಶ್ರೀಮತಿ ರಜನಿ ಶುಭಕರರವರಿಗೆ ಸನ್ಮಾನ

0

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಮಾರ್ಚ್ 8 ರಂದು ನಡೆದ ಮಹಿಳಾ ಕಲೋತ್ಸವ ದಲ್ಲಿ ಸುಳ್ಯದ ಮಹಿಳಾ ಉದ್ಯಮಿ, ಕಲರ್ಸ್ ಗಾರ್ಮೆಂಟ್ಸ್ ನ ಮಾಲಕಿ ಶ್ರೀಮತಿ ರಜನಿ ಶುಭಕರರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶ್ರೀಮತಿ ರಜನಿಯವರು ಸುಳ್ಯದ ಗಾಂಧಿನಗರದಲ್ಲಿ ಹಲವು ವರ್ಷಗಳಿಂದ ಕಲರ್ಸ್ ಗಾರ್ಮೆಂಟ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕರಿಗೆ ಟೈಲರಿಂಗ್ ಜೊತೆಗೆ ಹೊಸ ವಿನ್ಯಾಸದ ತರಬೇತಿಯನ್ನು ನೀಡುತ್ತಿದ್ದಾರೆ.