ಬಳ್ಪ-ಪಂಡಿಕಜೆಯಲ್ಲಿ ಭಕ್ತಿ ಸಂಭ್ರಮದ ಶ್ರೀ ಹೊಸಮ್ಮನವರ ನೇಮೋತ್ಸವ

0

ಬಳ್ಪ ಗ್ರಾಮದ ಪಂಡಿಕಜೆ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಶ್ರೀ ಹೊಸಮ್ಮನವರ ನೇಮೋತ್ಸವವು ಭಕ್ತಿ ಸಂಭ್ರಮದಿಂದ ಮಾ.8.ರಂದು ಜರುಗಿತು.

ಮಾ.1.ರಂದು ನಾಗತಂಬಿಲ, ಮೂಲ ನಾಗಬನದಲ್ಲಿ ನಾಗತಂಬಿಲ, ಗೊನೆ ಮೂಹುರ್ತ, ದುರ್ಗಾ ಪೂಜೆ ಜರುಗಿತು.ಮಾ.8.ರಂದು
ಮುಂಜಾನೆ ಪ್ರಾರ್ಥನೆ, ಸಂಕಲ್ಪ , ಸ್ವಸ್ತಿ ಪುಣ್ಯಾಹವಾಚನ , ದ್ವಾದಶ ನಾಳಿಕೇರ ಗಣಯಾಗ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪರ್ವ, ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ .ಅನ್ನಸಂತರ್ಪಣೆ ಜರುಗಿತು.

ರಾತ್ರಿ ಭಂಡಾರ ತೆಗೆದು ,ಅನ್ನಸಂತರ್ಪಣೆ .ಶ್ರೀ ಹೊಸಮ್ನವರ ನೇಮೋತ್ಸವ ಜರುಗಿತು.ದೈವಸ್ಥಾನದ ಮುಖ್ಯಸ್ಥ ರಾಜೇಶ್ ಗೌಡ ಅಜ್ಜಿಮನೆ, ಅವರ ಮನೆಯವರು,ಕುಟುಂಬಸ್ಥರು,ಊರ -ಪರಊರ ಭಕ್ತರು ಪಾಲ್ಗೊಂಡಿದ್ದರು.


.