ಬಾಳಿಲ: ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಬಾಳಿಲ ಮುಪ್ಪೇರ್ಯ ಇವರಿಂದ ಮಹಿಳಾ ದಿನಾಚರಣೆ, ಸನ್ಮಾನ

0

ದ. ಕ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಕೆರೆಯ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದ ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಬಾಳಿಲ ಮುಪ್ಪೇರ್ಯ ಇವರಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಿವೃತ್ತ ಶಿಕ್ಷಕರಾದ ಶಶಿಕಲಾ ಭಾಸ್ಕರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಹಿಂದಿನ ಕಾಲದ ಮಹಿಳೆಯರ ಪರಿಸ್ಥಿತಿ ಹಾಗೂ ಈಗಿನ ಕಾಲದಲ್ಲಿ ಬದಲಾದ ಮತ್ತು ಬದಲಾಗುತ್ತಿರುವ ಮಹಿಳೆಯರ ಜೀವನದ ಬಗ್ಗೆ ಶಶಿಕಲಾ ಭಾಸ್ಕರ್ ಮಾತನಾಡಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಹಾಗೂ ಬೆಳ್ಳಾರೆ ವಲಯದ ಅಂಗನಾಡಿ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ ಮಾತನಾಡುತ್ತಾ
ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆದರೆ ಹೇಯ ಕೃತ್ಯಗಳು ಇನ್ನಷ್ಟು ಹೆಚ್ಚಳವಾಗಬಹುದು. ಲಿಂಗ ತಾರತಮ್ಯ ಬಿಟ್ಟು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಹಾಗೂ ಹೆಣ್ಣು ಮಕ್ಕಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡುವಂತೆ ತಿಳಿಸಿದರು.


ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಶೋದ ಯನ್.ಕೆ ಹಾಗೂ ಸಮಾಜಸೇವಕಿ ಜಾಹ್ನವಿ ಕಾಂಚೋಡು ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಂಚೋಡು ಕೆರೆಯ ಹೂಳೆತ್ತುವ ಕೆಲಸ ಮಾಡಿದ ಎಲ್ಲ ಮಹಿಳೆಯರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸುಕೃತಿ ಮಹಿಳಾ ಕಾಯಕೋತ್ಸವ ತಂಡದ ನೇತ್ರತ್ವ ವಹಿಸಿದ ಹರಿಣಾಕ್ಷಿ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಾ. ದೀಕ್ಷಿತ್ ಪ್ರಾರ್ಥಿಸಿದರು. ತ್ರಿವೇಣಿ ವಿಶ್ವೇಶ್ವರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾ ಬರೆಮೇಲು ವಂದಿಸಿದರು.
ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.