ರೋಟರಿ ಮಹಿಳಾ ದಿನಾಚರಣೆ ಹಾಗೂ ಸನ್ಮಾನ

0


ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳು ಇದ್ದರೂ ಕೂಡ ಮಹಿಳೆ ಸಾಂಪ್ರದಾಯಿಕ ಪೊರೆಗಳನ್ನು ಕಳಚಿ
ಸಮುದಾಯದ ಮುಖ್ಯವಾಹಿನಿಯಲ್ಲಿ ಬರಬೇಕು. ಆಗ ಸಮತೆಯ ಸಾಧನೆ ಹಾಗೂ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಉಪನ್ಯಾಸಕಿ ಶ್ರೀಮತಿ ಲೀಲಾ ದಾಮೋದರ್ ಹೇಳಿದರು. ಇವರು ರೋಟರಿ ಸುಳ್ಯ ಹಾಗೂ ರೋಟರಿ ಇನ್ನರ್ ವೀಲ್ ಸಂಸ್ಥೆ ಸುಳ್ಯ ಇದರ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಸ್ತರಗಳಲ್ಲಿ ವನಸುಮಗಳಂತೆ ಸಾಧನೆಗೈದ ಮಹಿಳೆಯ ರಾದ ಶ್ರೀಮತಿ ಆರತಿ ಪುರುಷೋತ್ತಮ ಹಿರಿಯ ಪಿಗ್ಮಿ ಸಂಗ್ರಾಹಕಿ, ಗೀತಾ ದಯಾನಂದ್ ಸುಳ್ಯದ ಏಕೈಕ ಮಹಿಳಾ ರಿಕ್ಷಾ ಚಾಲಕಿ, ಶ್ರೀಮತಿ ರಾಜೇಶ್ವರಿ ಟೈಲರಿಂಗ್ ಉದ್ಯಮ, ಹಾಗೂ ಶ್ರೀಮತಿ ಚಂದ್ರಲೇಖಾ ಅಡ್ಕಾರ್,ಅಡಿಕೆ ಮರವೇರಿ ಅಡಿಕೆ ಕೀಳುವುದು ಹಾಗೂ ಔಷದಿ ಸಿಂಪಡಣೆ ಕ್ಷೇತ್ರದಲ್ಲಿ ಇವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದರ ಜೊತೆಗೆ ಮಹಿಳಾ ರೋಟರಿ ಸದಸ್ಯರಿಗೆ ಹಾಗೂ ಇನ್ನರ್ ವೀಲ್ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪ್ರಭಾಕರನ್ ನಾಯರ್, ಮುಂದಿನ ಸಾಲಿನ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕಾರ್ಯದರ್ಶಿ ಮಧುರಾ, ಇನ್ನರ್ ವೀಲ್ ಕಾರ್ಯದರ್ಶಿ ಸವಿತಾ ನಾರ್ಕೊಡು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ ಪೇರಾಲ್ ವಹಿಸಿದ್ದರು. ಇನ್ನರ್ ವೀಲ್ ಅಧ್ಯಕ್ಷೆ ನಯನಾ ಹರಿಪ್ರಸಾದ್ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು.