ಮಾ.14-15:ಸೋಣಂಗೇರಿ ಬೇಲ್ಯ ಮನೆಯಲ್ಲಿ ದೈವಗಳ ನೇಮೋತ್ಸವ

0


ಸೋಣಂಗೇರಿ ಬೇಲ್ಯ ಮನೆಯಲ್ಲಿ ಶ್ರೀ ಪಾಷಾಣಮೂರ್ತಿ, ಶ್ರೀ ಕೊರತ್ತಿ ದೈವ, ಮಯ್ಯೋಂತಿ ಮತ್ತು ಧರ್ಮದೈವ ಕುಪ್ಪೆಪಂಜುರ್ಲಿ ದೈವಗಳ ನೇಮೋತ್ಸವ ಮಾ.14 ಮತ್ತು 15ರಂದು ನಡೆಯಲಿದೆ.
ಮಾ.14ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ. ರಾತ್ರಿ 8.30ರಿಂದ ಪಾಷಾಣಮೂರ್ತಿ ದೈವದ ನೇಮೋತ್ಸವ, ಕೊರತ್ತಿ ದೈವದ ನೇಮ, ಮಯ್ಯೋಂತಿ ದೈವದ ನೇಮ ನಡೆಯಲಿದೆ. ಮಾ.15ರಂದು ಬೆಳಿಗ್ಗೆ 10ರಿಂದ ಧರ್ಮದೈವ ಕುಪ್ಪೆಪಂಜುರ್ಲಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಎರಡು ದಿನಗಳ ಈ ನೇಮೋತ್ಸವಕ್ಕೆ ಆಗಮಿಸಬೇಕೆಂದು ನರಸಿಂಗ ಪರವ ಮತ್ತು ಮಕ್ಕಳು ವಿನಂತಿಸಿದ್ದಾರೆ.