ಪಂಜ :ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

0

🔸 ಎಲ್ಲಾ ಘಟಕಗಳಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ನಿರ್ದೇಶನ : JC ಅಕ್ಷತಾ ಗಿರೀಶ್ ಐತಾಲ್


🔹2030ಕ್ಕೆ ರೇಬಿಸ್ ಮುಕ್ತ ಯೋಜನೆ ಯಶಸ್ವಿಯಾಗ ಬೇಕು : ಡಾ.ನಿತಿನ್ ಪ್ರಭು

ಜೇಸಿಐ ಪಂಜ ಪಂಚಶ್ರೀ, ಪಶುಸಂಗೋಪನಾ ಇಲಾಖೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಪಂಜ, ಕಲ್ಮಡ್ಕ,ಬಳ್ಪ,ಮುರುಳ್ಯ ಗ್ರಾಮ ಪಂಚಾಯತ್ ಗಳ ಸಹಯೋಗದೊಂದಿಗೆ
ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ ಮಾ.12ರಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಜೇಸಿಐ ವಲಯ 15ರ ಕಾರ್ಯಕ್ರಮ ವಿಭಾಗ ನಿರ್ದೇಶಕಿ ಅಕ್ಷತಾ ಗಿರೀಶ್ ಐತಾಲ್ ಉದ್ಘಾಟಿಸಿ ಮಾತನಾಡಿ”ಪಂಜ ಪಂಚಶ್ರೀ ಜೇಸಿಐ ಯವರ ಹುಚ್ಚು ನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ ಅದರ ನಿರ್ಮೂಲನೆ ತನಕ ನಿರಂತರವಾಗಿ ನಡೆಯುತ್ತಿದೆ.ಇವರ ಕಾರ್ಯಕ್ರಮ ಜೇಸಿ ಘಟಕಗಳಿಗೆ ಮಾದರಿಯಾಗಿದೆ.ವಲಯದ ಎಲ್ಲಾ
ಘಟಕಗಳಲ್ಲೂ ಈ ಕಾರ್ಯಕ್ರಮ ಅಳವಡಿಸಲು ನಿರ್ದೇಶನ ನೀಡುತ್ತೇವೆ.” ಎಂದು ಅವರು ಹೇಳಿದರು. ಜೇಸಿಐ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.ಅತಿಥಿ ಸುಳ್ಯ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಿತಿನ್ ಪ್ರಭು ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ಮುಂದಾಳತ್ವದಲ್ಲಿ
ನಿರಂತರವಾಗಿ ಹುಚ್ಚು ನಾಯಿ ನಿರೋಧಕ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು.ಮುಂದಿನ ವರುಷ 20 ನೇ ವರುಷದ ಲಸಿಕಾ ಕಾರ್ಯಕ್ರಮ ಜರುಗಲಿದ್ದು , ಇನ್ನಷ್ಟು ಕಡೆ ಇದು ಪಸರಿಸ ಬೇಕು. ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ಅಗತ್ಯವಿದ್ದು,2030 ನೇ ಇಸವಿಗೆ ರೇಬಿಸ್ ಮುಕ್ತವಾಗುವ ಸರ್ಕಾರದ , ಇಲಾಖೆಯ ಯೋಜನೆ ಯಶಸ್ವಿಯಾಗ ಬೇಕು.” ಎಂದು ಹೇಳಿದರು.

ಅತಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಚೂಂತಾರು, ಕಡಬ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜೀತ್ ಎಂ ಸಿ ಹಾಗೂ ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ರಾಜೇಶ್ ಕಂಬಳ ವೇದಿಕೆಗೆ ಆಹ್ವಾನಿಸಿದರು. ಗಗನ್ ಕಿನ್ನಿಕುಮೇರಿ ಜೇಸಿ ವಾಣಿ ನುಡಿದರು.ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ಅತಿಥಿಗಳನ್ನು ಪರಿಚಯಿಸಿದರು.ವಾಚಣ್ಣ ಕೆರೆಮೂಲೆ ವಂದಿಸಿದರು. ಘಟಕದ ಪದಾಧಿಕಾರಿಗಳು, ಸದಸ್ಯರು, ವೈದ್ಯರು ನಿಗದಿಪಡಿಸಿದ ಪಂಜ, ಕಲ್ಮಡ್ಕ, ಬಳ್ಪ, ಎಡಮಂಗಲ, ಮುರುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಸಾಕು ನಾಯಿಗಳಿಗೆ ಲಸಿಕೆ ನೀಡಿದರು.