ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಹಾಸಭೆ

0

ಅಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತಡ್ಕ, ಸಂಚಾಲಕರಾಗಿ ಜಾಕೆ ಸದಾನಂದ ಗೌಡ ಪುನರಾಯ್ಕೆ

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ 2022 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆಯಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ವಾರ್ಷಿಕ ವರದಿಯನ್ನು ವಾಚಿಸಿದರು. ಬಳಿಕ ಶಾಲಾ ವಾರ್ಷಿಕ ಬಜೆಟ್ ಮತ್ತು ಆಡಿಟ್ ವರದಿಯನ್ನು ಮಂಡಿಸಲಾಯಿತು.

ನಂತರ ೨೦೨೩ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ೧೫ಮಂದಿಯನ್ನು ಆಯ್ಕೆ ಮಾಡಲಾಗಿ, ಅಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತಡ್ಕ, ಸಂಚಾಲಕರಾಗಿ ಜಾಕೆ ಸದಾನಂದ ಗೌಡ, ಉಪಾಧ್ಯಕ್ಷರಾಗಿ ಕತ್ತಾರ್ ಇಬ್ರಾಹಿಂ, ಖಜಾಂಜಿಯಾಗಿ ಶ್ರೀನಿವಾಸ್ ಭಟ್.ಡಿ, ಜತೆಕಾರ್ಯದರ್ಶಿಯಾಗಿ ಶ್ಯಾಂಕುಮಾರ್ ಎಂ.ಎಸ್., ನಿರ್ದೇಶಕರಾಗಿ ರಾಮಚಂದ್ರ.ಎಂ, ಜಯರಾಮ ರೈ.ಕೆ, ಮೋನಪ್ಪ ಕೆ.ಎಂ., ಜಯರಾಮ ಕೆ.ಬಿ., ರಾಮಚಂದ್ರ ಕೆ.ಬಿ, ಸದಾನಂದ ಮಾವಜಿ, ಜನಾರ್ಧನ ಗೌಡ ಬರೆಮೇಲು, ವಸಂತ ಕೆ.ಎಸ್, ಸುಂದರ ಗೌಡ ಕಾಡುಸೊರಂಜ, ಮುಖ್ಯಶಿಕ್ಷಕಿ ಕುಸುಮಾವತಿ.ಯು.ಪಿ ಪುನರಾಯ್ಕೆಯಾದರು.