ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

0

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ , ಗ್ರಾಮ ಪಂಚಾಯತ್ ಗುತ್ತಿಗಾರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಗುಂಡಡ್ಕ ಕಾಲನಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ವಹಿಸಿದ್ದರು. ಸಾವಿತ್ರಿ ಮುಕುಂದ ಕಾರ್ಯಕ್ರಮ ಉದ್ಘಾಟಿಸಿ ದರು.

ವೇದಿಕೆಯಲ್ಲಿ ಕೊಲ್ಲಮೊಗ್ರ ಪ್ರಾಥಮಿಕ‌ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಪದ್ಮವೇಣಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ ಗ್ರಾಮ ಪಂಚಾಯತ್ , ಶ್ರೀಮತಿ ಅನಿತಾ , ಅಮೃತ್ ಅಭಿಯಾನದ ಶ್ರೀಮತಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪುಷ್ಪ ಮೇದಪ್ಪ , ಜತೆ ಖಜಾಂಜಿ ಶ್ರೀಮತಿ ಶಾರದಾ ಡಿ ಶೆಟ್ಟಿ , ನಿರ್ದೇಶಕರುಗಳಾದ ಶ್ರೀಮತಿ ವೀಣಾ ಮೋಂಟಡ್ಕ , ಶ್ರೀಮತಿ ಲೋಲಾಕ್ಷಿ ದಾಸನ ಕಜೆ ,ಶ್ರೀಮತಿ ರಾಜೀವಿ ಐವ೯ನಾಡು ಉಪಸ್ಥಿತರಿದ್ದ ರು. ಶ್ರೀಮತಿ ಜಯಶ್ರೀ ಪ್ರಾಥಮಿಕ ಸುರಕ್ಷಾ ಅಧಿಕಾರಿ , ನೇತ್ರಾವತಿ ಆಶಾ ಕಾರ್ಯಕರ್ತೆ , ಶ್ರೀಮತಿ ಭಾಗೀರಥಿ ಆಶಾ ಕಾರ್ಯಕರ್ತೆ ,ಶ್ರೀಮತಿ ಕಮಲ ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮಕ್ಕೆ ಸಹಕರಿಸಿದ್ದರು ಟ್ರಸ್ಟ್ ನಿರ್ದೆಶಕಿ ಶ್ರೀಮತಿ ಸವಿತಾ ಕಾಯರ ಕಾರ್ಯಕ್ರಮ ಸಂಯೋಜಿಸಿದರು.