ಅಜ್ಜಾವರ ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಅಡ್ಪಂಗಾಯ

0

ಅಜ್ಜಾವರ ಗ್ರಾಮ ಕಾಂಗ್ರೆಸ್ ಸಮಿತಿ ಸಭೆಯು ಮಾ.13 ರಂದು ಮೇನಾಲ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ ಅತ್ಯಡ್ಕ‌ ವಹಿಸಿದ್ದರು.
ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು ನೂತನ ಗ್ರಾಮ ಸಮಿತಿ ಅಧ್ಯಕ್ಷ ರಾಗಿ ರಾಹುಲ್ ಅಡ್ಪಂಗಾಯ, ಕಾರ್ಯದರ್ಶಿಗಳಾಗಿ ಅಬ್ದುಲ್ ಅಜ್ಜಾವರ, ಮಹಮ್ಮದ್ ಕುಂಞಿ ಮೇನಾಲ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬಾಸ್ ಎ.ಬಿ. ಆಯ್ಕೆಯಾದರು.

ಗ್ರಾಮ ಕಾಂಗ್ರೆಸ್ ‌ಮಹಿಳಾ ಘಟಕ ಅಧ್ಯಕ್ಷೆಯಾಗಿ ಜಯಲಕ್ಷ್ಮಿ ಸಂಜೀವ ರಾವ್, ಕಾರ್ಯದರ್ಶಿಯಾಗಿ ಶ್ವೇತ ಕುಮಾರಿ ಶಿರ್ವಾಜೆ ಆಯ್ಕೆಯಾದರು.

ಗ್ರಾಮ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಗಿ ಅಬ್ದುಲ್ ಬೇಲ್ಯ ಆಯ್ಕೆಯಾದರು.