ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಜಾತ್ರೋತ್ಸವ ಸಂಪನ್ನ

0

ಸಭಾ ಕಾರ್ಯಕ್ರಮ – ಸನ್ಮಾನ – ಸಾಂಸ್ಕೃತಿಕ ಕಾರ್ಯಕ್ರಮ

ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವವು ಮಾ.14 ಮತ್ತು 15ರಂದು ವಿಜ್ರಂಭಣೆಯಿಂದ ನಡೆಯಿತು.

ಮಾ.14ರಂದು ಬೆಳಿಗ್ಗೆೆ ಮುಂಡೋಡಿ ತರವಾಡು ಮನೆಯಿಂದ ಶ್ರೀೆ ದೈವಗಳ ಭಂಡಾರ ಬರುವುದು, ಶ್ರೀೆ ರುದ್ರಚಾಮುಂಡಿ ದೈವಸ್ಥಾನದಿಂದ ದೈವದ ಭಂಡಾರ ಬರುವುದು, ರಾತ್ರಿ ಉಗ್ರಾಣ ತುಂಬಿಸುವುದು ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ತಳೂರಿನಿಂದ ಶ್ರೀೆ ದೈವಗಳ ಭಂಡಾರ ಬರುವುದು, ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳ ಭಂಡಾರ ಹೊರಡುವುದು ನಡೆಯಿತು. ಮಾ.15ರಂದು ಪ್ರಾತಃಕಾಲ ಶ್ರೀೆ ರಾಜ್ಯದೈವದ ನೇಮ, ಶ್ರೀೆ ಬೆಳಿಗ್ಗೆೆ ರುದ್ರಚಾಮುಂಡಿ ದೈವದ ನೇಮ ಶ್ರೀೆ ಪುರುಷ ದೈವದ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ ಶ್ರೀೆ ಪಂಜುರ್ಲಿ ದೈವದ ನೇಮ ನಡೆದು ಸಂಜೆ ಧ್ವಜಾವರೋಹಣ ನಡೆಯಿತು.

ಸಭಾಕಾರ್ಯಕ್ರಮ :
ಮಾ.14ರ ರಾತ್ರಿ 8 ಗಂಟೆಯಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜ್ಯ ದೈವ ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ ವಹಿಸಿ ಸ್ವಾಗತಿಸಿದರು.


ವೇದಿಕೆಯಲ್ಲಿ ಒಳನಾಡು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ, ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷೆ ಸುಲೋಚನಾ ದೇವ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ವೇಣುಕುಮಾರ್ ಚಿತ್ತಡ್ಕ, ಪ್ರೀತಂ ಮುಂಡೋಡಿ, ಪದ್ಮನಾಭ ಮೀನಾಜೆ, ಶಶಿಧರ ಜಾಕೆ, ಲೋಕಪ್ಪ ಗೌಡ ಶೀರಡ್ಕ, ಯಶೋಧ ರಾಮಚಂದ್ರ ಪಾರೆಪ್ಪಾಡಿ, ಮಹಾದೇವಿ ಕಿಶೋರ್ ಕುಮಾರ್ ಪೈಕ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಜಾನಪದ ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಮೆಟ್ಟಿನಡ್ಕ, ರಾಷ್ಟ್ರ ಮಟ್ಟದ ಕರಾಟೆಪಟು ಚೇತನ್ ಮುಂಡೋಡಿ ಹಾಗೂ ಸಚಿವ ಎಸ್.ಅಂಗಾರರನ್ನು ಸನ್ಮಾನಿಸಲಾಯಿತು.
ದಿವಾಕರ ಮುಂಡೋಡಿ ವಂದಿಸಿದರು. ನ್ಯಾಯವಾದಿ ವಿನಯ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾಪಿಕಾಡ್, ಸಾಯಿ, ಬೋಳಾರ್ ಅಭಿನಯದಲ್ಲಿ ಚಾಪರ‌್ಕ ಕಲಾವಿದರಿಂದ ನಮಸ್ಕಾರ ಮಾಸ್ಟ್ರೆೆ ಎಂಬ ಹಾಸ್ಯಮಯ ನಾಟಕ ನಡೆಯಿತು.

ಹಾಗೂ ಊರಿನ ಸಮಸ್ತರು, ಸೀಮೆಗೆ ಒಳಪಟ್ಟ ಊರ ಗೌಡರು, ಊರಪರವೂ ಭಕ್ತರು ಉಪಸ್ಥಿತರಿದ್ದರು.