ಗಿರಿದರ್ಶಿನಿ ಹಾಲ್ ನಲ್ಲಿ ಕಳೆದು ಹೋಗಿದ್ದ ಚಿನ್ನ ಮತ್ತೆ ವಾರಿಸುದಾರರಿಗೆ

0


ಸುಳ್ಯದ ಗಿರಿದರ್ಶಿನಿ ಸಭಾ ಭವನದಲ್ಲಿ ಜರುಗಿದ ಮದುವೆಯ ಕಾರ್ಯಕ್ರಮ ದಲ್ಲಿ ಕಳೆದುಹೋಗಿದ್ದ ಚಿನ್ನದ ಬ್ರೇಸ್ ಲೆಟ್ ಮತ್ತೆ ವಾರಿಸುದಾರರಿಗೆ ವಾಪಾಸ್ಸಾದ ಬಗ್ಗೆ ವರದಿಯಾಗಿದೆ.
ಮಾ.9ರಂದು ರವಿಕಿರಣ್ ಎಂಬವರು ಸುಮಾರು 62 ಸಾವಿರ ಬೆಲೆಯ ಬಂಗಾರದ ಬ್ರೇಸ್ಲೇಟ್ ಮದುವೆ ಕಾರ್ಯಕ್ರಮದಲ್ಲಿ ಕಳೆದು ಕೊಂಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಗಿರಿದರ್ಶಿನಿಯ ಆಡಳಿತ ಮಂಡಳಿ ಹಾಲ್ ನಲ್ಲಿ ಅಳವಡಿಸಿದ
ಸಿಸಿಟಿವಿ ಗಳನ್ನು ಪರಿಶೀಲಿಸಿ,
ಒಂದು ವಾರದ ಬಳಿಕ ಮಹಿಳೆಯೊಬ್ಬರಿಂದ ವಾಪಸು ಪಡೆದು ವಾರಸುದಾರರಿಗೆ ಹಿಂತಿರುಗಿಸಿರುವುದಾಗಿ ಸಂಘದ ಅಧ್ಯಕ್ಷರಾದ ಜನಾರ್ದನ ನಾಯ್ಕ್ ಸುದ್ದಿಗೆ ತಿಳಿಸಿದ್ದಾರೆ.