ದುಗ್ಗಲಡ್ಕ ದುಗ್ಗಲಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ

0

ಧಾರ್ಮಿಕ ಸಭೆ; ಸಚಿವ ಅಂಗಾರ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗಿ

ಸಂಸ್ಕಾರಯುತ ಜೀವನ ಪದ್ಧತಿಯೇ ಹಿಂದೂ ಧರ್ಮ : ಗಣರಾಜ ಭಟ್ ಕೆದಿಲ


ಸರ್ವಜನ ಸುಖಿನೋ ಭವಂತು ಎಂದು ಸಾರಿದ ಧರ್ಮ ಅದು ಹಿಂದೂ ಧರ್ಮ.ನಮ್ಮ ದೇಶ ಇರುವುದೇ ಭಕ್ತಿಯ ಆಧಾರದಲ್ಲಿ.ಪಠ್ಯದಲ್ಲಿ ಬಂದ ವಿಚಾರ ಮರೆತು ಹೋಗಿರಬಹುದು ಆದರೆ ಹಿರಿಯರು ಕಲಿಸಿಕೊಟ್ಟ ಸಂಸ್ಕಾರ ಮರೆತುಹೋಗಲು ಸಾಧ್ಯವಿಲ್ಲ. ಸಂಸ್ಕಾರಯುತ ಜೀವನ ಪದ್ಧತಿಯೇ ಹಿಂದೂ ಧರ್ಮ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಮಾತೃ ಸುರಕ್ಷಾ ಪ್ರಮುಖ್ ಬ.ಗಣರಾಜ ಭಟ್ ಕೆದಿಲ ಹೇಳಿದರು.


ಅವರು ಮಾ.19 ರ ಸಂಜೆ ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಸಭೆಯ ಉದ್ಘಾಟನೆಯನ್ನು ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್ .ಅಂಗಾರ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನ ಆಗುತ್ತಿದೆ. ಧಾರ್ಮಿಕ ಕೇಂದ್ರಗಳಿಗೆ ಭಕ್ತಾಧಿಗಳು ಆಧಿಕ ಸಂಖ್ಯೆಯಲ್ಲಿ ಆಗಮಿಸಿದಾಗ ಸಾನಿಧ್ಯ ವೃದ್ಧಿಯಾಗುತ್ತದೆ.ನಾವೂ ಅಭಿವೃದ್ಧಿ ಗೊಳ್ಳುತ್ತೇವೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗಮಿಸಿ ಮಾತನಾಡಿ ದೇಶದಲ್ಲಿ ಬದಲಾವಣೆಯ ಶಕೆ ಆರಂಭವಾಗಿದೆ. ಪ್ರಧಾನಿಯವರ ನೇತೃತ್ವದಲ್ಲಿ ಅಯೋದ್ಯೆಯ ಶ್ರೀ ರಾಮ ಮಂದಿರ ಸೇರಿದಂತೆ ದೇಶದೆಲ್ಲೆಡೆ ಹಿಂದೂ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರವಾಗಿ ಗತ ವೈಭವಕ್ಕೆ ಸಾಕ್ಷಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲೇ ನಮಗೆ ವಿಶೇಷ ಸ್ಥಾನಮಾನ ಲಭಿಸಿದೆ.
ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನಕ್ಕೆ ಆಗಮಿಸುವ ಯೋಗಭಾಗ್ಯ ದೊರತಿದೆ.ಇಲ್ಲಿನ ಜನ ಬಹಳ ಪ್ರೀತಿ ಕೊಟ್ಟಿದ್ದಾರೆ, ನನ್ನಿಂದ ಏನು ಸಹಕಾರ ಮಾಡಲು ಸಾಧ್ಯವೋ ಅದನ್ನು ಮಾಡಲು ಸದಾ ಸಿದ್ಧ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಹಿಸಿದ್ದರು. ಉಬರಡ್ಕ ಗ್ರಾ.ಪಂ.ಸದಸ್ಯ ಹರೀಶ್ ಉಬರಡ್ಕ ಮಾತನಾಡಿದರು.
ವೇದಿಕೆಯಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್, ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ನ.ಪಂ.ಸದಸ್ಯರುಗಳಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗ್ಗಲಡ್ಕ, ದುಗ್ಗಲಡ್ಕ ಹಾಲು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಎನ್.ಜಿ. ,ದೈವಸ್ಥಾನ ಸಮಿತಿ ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು,ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ, ಕೆ.ಎಂ.ಎಫ್ ನ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ, ಕುಕ್ಕಂದೂರು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಸುಭಾಶ್ ರೈ,ಆರ್.ಎಸ್.ಎಸ್.ನ ಸಂತೋಷ್ ಕುಮಾರ್ , ಕಹಳೆ ವಾಹಿನಿಯ ಶ್ಯಾಮ್ ಸುದರ್ಶನ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಯತೀಶ್ ರೈ ದುಗ್ಗಲಡ್ಕ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶೈಲಜಾ ವಂದಿಸಿದರು. ಗಿರೀಶ್ ಕುಂಟಿನಿ ಮತ್ತು ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರುಧಿರ ಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.