ವಿನೋಬನಗರ : ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಹಾಗೂ ವಿವೇಕಾನಂದ ಅನುದಾನಿತ ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ

0


ವಿನೋಬನಗರ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ವಿವೇಕಾನಂದ ಅನುದಾನಿತ ಹಿ.ಪ್ರಾ.ಶಾಲೆ 2022-23 ನೇ ಸಾಲಿನ 7ನೇ ಮತ್ತು 1೦ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮ ಮಾ.21 ರಂದು ಶಾಲಾ ವಠಾರದಲ್ಲಿ ನಡೆಯಿತು.


ಸರಸ್ವತಿ ವಿದ್ಯಾಲಯ ಪುರುಷಕಟ್ಟೆ ಇದರ ಸಂಚಾಲಕರು ಹಾಗೂ ಉಪನ್ಯಾಸಕರಾದ ಅವಿನಾಶ್ ಕೊಡಂಕಿರಿ ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಶಾಲಾ ಸಂಚಾಲಕರಾದ ಸುಧಾಕರ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. 7ನೇ ತರಗತಿ ವಿದ್ಯಾರ್ಥಿಗಳು 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 1೦ನೇ ತರಗತಿ ವಿದ್ಯಾರ್ಥಿಗಳು 9 ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಹಸ್ತಾಂತರಿಸುವ ಮೂಲಕ ದೀಪಪ್ರದಾನ ಕಾರ್ಯಕ್ರಮ ನಡೆಯಿತು.


ಪ್ರಾಥಮಿಕ ಶಾಲಾ ಶಿಕ್ಷಕರಾದ ಶಶಿಧರ್, ಪ್ರೌಢಶಾಲಾ ಶಿಕ್ಷಕಿ ಕವಿತಾರವರು ಶಿಕ್ಷಕರ ಪರವಾಗಿ ಮಾತನಾಡಿದರು. 7 ನೇ ಮತ್ತು 1೦ನೇ ತರಗತಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ, ಶಿಕ್ಷಕ ಶಶಿಧರ್ ವಂದಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here