4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ

0

ಕಾಸರಗೋಡಿನ ಚೆರ್ಕಳದಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

ಸುಳ್ಯ ಹಳೆಗೇಟು ಮಗಳ ಮನೆಗೆ ಬಂದಿದ್ದ ಪುತ್ತೂರು ಮೂಲದ ಜುಬೇದ ಎಂಬ ಮಹಿಳೆ ನವಂಬರ್ 26 ರಂದು ತನ್ನ ಮನೆಗೆ ಎಂದು ಹೋದವರು ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಪತ್ನಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಅವರ ಪತಿ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಇದೀಗ ಕಾಣೆಯಾಗಿರುವ ಮಹಿಳೆ ಜುಬೇದಾ 4 ತಿಂಗಳ ಬಳಿಕ ಸುಳ್ಯ ಹಳೆಗೇಟಿನಲ್ಲಿರುವ ಮಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಾನು ಇರುವ ಜಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅವರ ಮಗಳು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಸರಗೋಡು ಜಿಲ್ಲೆಯ ಚೆರಕ್ಕಳಕ್ಕೆ ತೆರಳಿದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಸುಳ್ಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಮನೆಯವರೊಂದಿಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿದು ಬಂದಿದೆ.
ಇವರು ಚೆರಕ್ಕಳದಲ್ಲಿ ಮನೆ ಕೆಲಸಕ್ಕೆ ಹೋಗಿ ನಿಂತಿದ್ದರು ಎಂದು ತಿಳಿದುಬಂದಿದೆ.