ಆಲೆಟ್ಟಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಬೆಳ್ಳಾರೆಗೆ ನಿಯೋಜನೆ

0

ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ತಾ.ಪಂ. ಆವರಣದಲ್ಲಿ ಮೌನ ಪ್ರತಿಭಟನೆ

ಆಲೆಟ್ಟಿ ಗ್ರಾ.ಪಂ.ನ ಗ್ರೇಡ್ ೧ ಕಾರ್ಯದರ್ಶಿ ಸೃಜನ್ ಎ.ಜೆ.ರವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬೆಳ್ಳಾರೆ ಗ್ರಾ.ಪಂ.ಗೆ ನಿಯೋಜನೆ ಮಾಡಲಾಗಿದ್ದು ಇದನ್ನು ಪ್ರತಿಭಟಿಸಿ ಪಂಚಾಯತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸುಳ್ಯ ತಾಲೂಕು ಪಂಚಾಯತ್ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಈ ನಿಯೋಜನೆ ಮಾಡಲಾಗಿರುವುದಾಗಿ ದ.ಕ.ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈ ಆದೇಶವನ್ನು ಹೊರಡಿಸಿರುವುದಾಗಿ ಆದೇಶ ಪತ್ರದಲ್ಲಿ ತಿಳಿಸಲಾಗಿತ್ತು.

ಸೃಜನ್‌ರವರನ್ನು ಆಲೆಟ್ಟಿ ಪಂಚಾಯತ್‌ನಲ್ಲಿಯೇ ಇರಿಸಿಕೊಳ್ಳಬೇಕೆಂದು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರುಗಳು ಸುಳ್ಯ ತಾ.ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಸುದ್ದಿಯೊಂದಿಗೆ ಮಾತನಾಡಿದ ಗ್ರಾ.ಪಂ.ಸದಸ್ಯ ಸತ್ಯಕುಮಾರ್ ಅಡಿಂಜ, ಸೃಜನ್‌ರವರು ಕಳೆದ ಮೂರು ವರ್ಷಗಳಿಂದ ನಮ್ಮ ಗ್ರಾ.ಪಂ,ನಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ. ೯/೧೧ ಮುಂತಾದ ಸಾರ್ವಜನಿಕ ಸೇವೆಗಳನ್ನು ನೀಡುವ ಕೆಲಸ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಮಾಡಿ ಕೊಡುತ್ತಿದ್ದು, ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದರೆ ವಿನಾಃ ಕಾರಣ ಕಾರ್ಯದರ್ಶಿಯ ಮೇಲೆ ಸಾರ್ವಜನಿಕರ ದೂರು ಬಂದಿದೆ ಎಂದು ಆರೋಪಿಸಿ ಅವರ ಮೇಲೆ ಈ ರೀತಿಯ ಕ್ರಮ ಜರುಗಿಸುವುದು ಸರಿಯಲ್ಲ ಅದ್ದರಿಂದ ಕೂಡಲೇ ಆದೇಶ ಪತ್ರವನ್ನು ಹಿಂತೆಗೆದು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಅಗ್ರಹಿಸಿ, ಈ ಮೌನ ಪತ್ರಿಭಟನೆ ಮಾಡುತ್ತಿದ್ದೇವೆ.
ಸಂಬಂದ್ಧಪಟ್ಟವರು ನಮ್ಮ ಮನವಿಗೆ ಸ್ಪಂದಿಸಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ಚಂದ್ರಕಾಂತ್ ನಾರ್ಕೋಡು, ಮೀನಾಕ್ಷಿ ಕುಡೆಕಲ್ಲು ಉಪಸ್ಥಿತರಿದ್ದು, ಅವರು ಕೂಡ ಸೃಜನ್‌ರವರನ್ನು ಆಲೆಟ್ಟಿ ಗ್ರಾ.ಪಂ.ನಲ್ಲೇ ಇರಿಸಿಕೊಳ್ಳುವಂತೆ ಮಾತನಾಡಿದರು.