ಅಮರಮುಡ್ನೂರು ಘನತ್ಯಾಜ್ಯ ಘಟಕದಲ್ಲಿ ಸ‌ಂಜೀವಿನಿ ಸದಸ್ಯರಿಂದ ಕಸ ವಿಂಗಡಣೆಯ ಶ್ರಮ ದಾನ

0

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಘನತ್ಯಾಜ್ಯ ಘಟಕದಲ್ಲಿ ಮನೆ ಮನೆ ಸಂಗ್ರಹಿಸಿದ ಕಸದ ವಿಂಗಡಣೆಯ ಕೆಲಸವನ್ನು ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮದ ಸಂಜೀವಿನಿ ಒಕ್ಕೂಟದ ಸದಸ್ಯರು ಶ್ರಮದಾನದ ಮೂಲಕ ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಶ್ರಮದಾನದಲ್ಲಿ ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ರವರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಸಹಕರಿಸುತ್ತಿದ್ದಾರೆ. ಮನೆಗಳಿಂದ ಸಂಗ್ರಹ ಮಾಡಿದ ಕಸವನ್ನು ವಿಂಗಡಿಸಿ ತುಂಬಲು ಉಪಯೋಗಿಸದೇ ಇರುವ ಹಳೆ ಸೀರೆಗಳನ್ನು ಸಂಗ್ರಹಿಸಿ ಗೋಣಿ ಚೀಲದ ಮಾದರಿಯಲ್ಲಿ ಹೊಲಿಗೆ ಮಾಡಿ ತುಂಬಿಸಿಡಲಾಗುತ್ತಿದೆ. ಪಂಚಾಯತ್ ಸದಸ್ಯರು, ಸಂಜೀವಿನಿ ಒಕ್ಕೂಟದ ಸೇವಾ ಪ್ರತಿನಿಧಿಗಳು ಮತ್ತು ಸದಸ್ಯರು ಹಾಗೂ ಪಂಚಾಯತ್ ಪಿ.ಡಿ.ಒ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸುತ್ತಿದ್ದಾರೆ.