ಮಾ. 31ರಂದು ಸುಳ್ಯ ಶಿಶು ಅಭಿವೃದ್ಧಿ ಇಲಾಖೆಯ ಚಾಲಕ ಯೋಗೀಶ್ ಗೌಡ ಎಂ. ನಿವೃತ್ತಿ

0

ಕಳೆದ 29 ವರ್ಷಗಳಿಂದ ಸುಳ್ಯ ಸಿ.ಡಿ.ಪಿ.ಒ. ಕಚೇರಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇನೆಕಲ್ಲು ಗ್ರಾಮದ ಯೋಗೀಶ್ ಗೌಡ ಎಂ. ಮಾ. 31ರಂದು ವಯೋ‌ ನಿವೃತ್ತಿ ಹೊಂದಲಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಯೇನೆಕಲ್ಲಿನ ದಿ‌. ಈಶ್ವರ ಗೌಡ ಮತ್ತು ಮೀನಾಕ್ಷಿ ದಂಪತಿಯ ಪ್ರಥಮ ಪುತ್ರರಾಗಿ 1963ರ ಮಾರ್ಚ್ 18 ರಂದು ಜನಿಸಿದ ಯೋಗೀಶರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಯಿದೆ ದೇವೂಸ್ ಶಿಕ್ಷಣ ಸಂಸ್ಥೆ ಪುತ್ತೂರಿನಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ರೊಜಾರಿಯಾ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ಪೂರೈಸಿರುತ್ತಾರೆ. ಬಳಿಕ 1988 ರ ಫೆ. 19 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ವಾಹನ ಚಾಲಕರಾಗಿ ಕರ್ತವ್ಯಕ್ಕೆ ಹಾಜರಾಗಿ, ಜೂನ್ 10. 1994ರಲ್ಲಿ ಸುಳ್ಯ ಶಿಶು ಅಭಿವೃದ್ಧಿ ಇಲಾಖೆಗೆ ವರ್ಗಾವಣೆಗೊಂಡು ಸುಳ್ಯದಲ್ಲಿ ಸುಮಾರು 29 ವರ್ಷಗಳ ಸೇವೆ ಸಲ್ಲಿಸಿ ಒಟ್ಟು 35 ವರ್ಷಗಳ ಸುದೀರ್ಘ ಸೇವೆಯಿಂದ ಮಾ‌. 31ರಂದು ನಿವೃತ್ತಿ ಹೊಂದಲಿದ್ದಾರೆ. 2019ರಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ಶಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಪತ್ನಿ ಶ್ರೀಮತಿ ರೇಖಾ ಬಂಟ್ವಾಳ ತಾಲೂಕಿನ ಪೆರ್ನೆಯವರಾಗಿದ್ದು, ಗೃಹಿಣಿಯಾಗಿದ್ದಾರೆ. ಪುತ್ರರಿಬ್ಬರು ಇಂಜಿನಿಯರಿಂಗ್ ಪದವೀಧರರಾಗಿದ್ದು, ಹಿರಿಯ ಪುತ್ರ ಮಿಥುನ್ ನಾವಿನ್ಯ ಕ್ಯಾಡ್ ಸಾಪ್ಟ್ ಕಂಪನಿಯಲ್ಲಿ ಮತ್ತು ಹೇಮಂತ್ ಸೀಬೀ ಡಿಸೈನ್ ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.