ಕೂತ್ಕುಂಜ : ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನ ಕಾರ್ಯಕ್ರಮ

0

ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್ ಧನುಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್, ಚಿಗುರು ಮಹಿಳಾ ನವೋದಯ ಸಂಘ ಅಡ್ಡತೋಡು ಇವುಗಳ ಜಂಟಿ ಆಶ್ರಯದಲ್ಲಿ ಚಂದ್ರಾ ಹೊನ್ನಪ್ಪ ಚಿದ್ಗಲ್ ರವರ ನಿವಾಸದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮ ಮತ್ತು ಸನ್ಮಾನ ನಡೆಸಲಾಯಿತು.

ಹಿರಿಯರಾದ ಶ್ರೀಮತಿ ತಿಮ್ಮಕ್ಕ ಆದಪ್ಪ ಚಿದ್ಗಲ್, ಶ್ರೀಮತಿ ಚೋಮಕ್ಕ ಸುಬ್ರಾಯ ಕಕ್ಯಾನ ಗುಡ್ಡೆ ಮನೆ, ಶ್ರೀಮತಿ ಅಕ್ಕಯ್ಯ ತಿಮ್ಮಪ್ಪ ಚಿದ್ಗಲ್, ಶ್ರೀಮತಿ ದುಗ್ಗಮ್ಮ ವೆಂಕಪ್ಪ ಅಡ್ಡತೋಡು ಇವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಮೀನಾಕ್ಷಿ ಶೀನಪ್ಪ ಗೌಡ ಕಿನ್ನಿಕುಮೇರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ದೇರಾಜೆ ಭಾಗವಹಿಸಿದ್ದರು.

ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಲತಾ ದಿನೇಶ್ ಸಭಾಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಮಹಿಳಾ ಸಂಘಟನೆಯ ಅಧ್ಯಕ್ಷರು ಹಾಗೂ ಸಂಜೀವಿನಿ ಸಂಘದ ಅಧ್ಯಕ್ಷರಾದ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಧನುಶ್ರೀ ನವೋದಯ ಸಂಘ ಚಿದ್ಗ ಲ್ ಅಧ್ಯಕ್ಷೆ ಶ್ರೀಮತಿ ಹೇಮಾ ವಸoತ್ , ಹಾಗೂ ಚಿಗುರು ನವೋದಯ ಸಂಘ ಅಡ್ಡತೋಡು ಇದರ ಅಧ್ಯಕ್ಷೆ ಬೇಬಿ ದೇವದಾಸ್ ಖಂಡಿಗೆ ಉಪಸ್ಥಿತರಿದ್ದರು. ಶ್ರೀಮತಿ ಪದ್ಮಾವತಿ ಚಿನ್ನಪ್ಪ ರವರು ಪ್ರಾರ್ಥಿಸಿದರು. ಚಂದ್ರಾ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿದರು. ಹೇಮಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ವೀಣಾ ಗಿರಿಧರ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು