ಮಾ.31 ರಂದು ಚೊಕ್ಕಾಡಿ ಸಹಕಾರಿ ಸಂಘದ ಕಿರಿಯ ಗುಮಾಸ್ತ ಅಚ್ಚುತ್ತ ಗೌಡ ದೊಡ್ಡಡ್ಕ ನಿವೃತ್ತಿ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿರುವ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಿರಿಯ ಗುಮಾಸ್ತ ದಿ.ಸೋಮಪ್ಪ ಗೌಡ ದೊಡ್ಡಡ್ಕ ಮತ್ತು ದಿ.ಕುಂಞಮ್ಮ ದಂಪತಿಯ ಪುತ್ರರಾಗಿರುವ ‌ಅಚ್ಚುತ್ತ ಗೌಡ ದೊಡ್ಡಡ್ಕ ರವರು ಸುದೀರ್ಘ 42 ವರ್ಷಗಳ ಕಾಲದ ವೃತ್ತಿ ಸೇವೆಯಿಂದ ಮಾ.31 ರಂದು ನಿವೃತ್ತಿ ಹೊಂದಲಿದ್ದಾರೆ.
ಕುಕ್ಕುಜಡ್ಕದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ನಂತರ
1981 ರಲ್ಲಿ ದಿನಗೂಲಿ‌ ನೌಕರನಾಗಿ ಸಹಕಾರಿ ಸಂಘಕ್ಕೆ ಸೇರ್ಪಡೆಗೊಂಡರು. ಬಳಿಕ 1985 ರಿಂದ ಖಾಯಂ ನೌಕರನಾಗಿ ಸಂಘದಲ್ಲಿ ವೃತ್ತಿ ಸೇವೆ ಪ್ರಾರಂಭಿಸಿದ್ದು ಕಿರಿಯ ಗುಮಾಸ್ತರಾಗಿ ವ್ಯಾಪಾರ ವಿಭಾಗದಲ್ಲಿ ಸುಮಾರು 38 ವರ್ಷ ಹಾಗೂ ಬ್ಯಾಂಕಿಂಗ್ ವಿಭಾಗದಲ್ಲಿ 4 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

ಪ್ರಸ್ತುತ ಇವರು ಪತ್ನಿ ಶ್ರೀಮತಿ ಗಿರಿಜಾ, ಓರ್ವ ಪುತ್ರ ಪವನ್ ಕುಮಾರ್ (ಎಂ.ಕಾಂ) ಮತ್ತು ಪುತ್ರಿ ಕು.ಪಲ್ಲವಿ (ಬಿ.ಎಡ್)
ಯೊಂದಿಗೆ ಅಮರಮುಡ್ನೂರಿನ ದೊಡ್ಡಿಹಿತ್ಲು ಎಂಬಲ್ಲಿ ವಾಸವಾಗಿರುತ್ತಾರೆ.