ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ: ಶ್ರೀಮತಿ ಭಾಗೀರಥಿ ಎನ್. ಚಕ್ರ ಎಸೆತದಲ್ಲಿ ಪ್ರಥಮ

0

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಾ. 27ರಿಂದ 30ರ ವರೆಗೆ ನಡೆದ 42ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ 55ರ ವಯೋಮಾನದಲ್ಲಿ ಬಳ್ಪ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭಾಗೀರಥಿ ಎನ್. ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಇವರು ಸುಬ್ರಹ್ಮಣ್ಯದ ಕೆ.ಎಸ್.ಎಸ್‌. ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕರಾದ ತುಕಾರಾಂ ಯೇನೆಕಲ್ಲುರವರ ಪತ್ನಿ.