ಚೊಕ್ಕಾಡಿ ಸಹಕಾರಿ ಸಂಘದ ನಿವೃತ್ತ ಕಿರಿಯ ಗುಮಾಸ್ತ ಅಚ್ಚುತ ಗೌಡ ದೊಡ್ಡಡ್ಕರಿಗೆ ಬೀಳ್ಕೊಡುಗೆ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಲ್ಲಿರುವ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 42 ವರ್ಷ ಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮಾ.31 ರಂದು ನಿವೃತ್ತಿ ಹೊಂದಿದ ಕಿರಿಯ ಗುಮಾಸ್ತ ದೊಡ್ಡಡ್ಕ ಅಚ್ಚುತ ಗೌಡ ದಂಪತಿಯನ್ನು ಸಂಘದ ವತಿಯಿಂದ ಬೀಳ್ಕೊಡಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ ಯವರು ಮಾತನಾಡಿ ಅಚ್ಚುತ ಗೌಡ ರವರ ಸುದೀರ್ಘ ಸೇವೆಯ ಕುರಿತು ಶ್ಲಾಘನೆ ವ್ಯಕ್ತ ಪಡಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದು ಶುಭ ಹಾರೈಸಿದರು.