ಪಲ್ಲೋಡಿ : ವಾರ್ಷಿಕ ನೇಮ ನಡಾವಳಿ

0


ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

“ಧರ್ಮಧ ಜೌಕಟಿನಲ್ಲಿ ಮಕ್ಕಳನ್ನು ಬೆಳೆಸಿ” : ಶಿವರಾಮಯ್ಯ ಕರ್ಮಾಜೆ

ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ಕೂಡುಕಟ್ಟಿನ ದೈವಸ್ಥಾನ ಪಲ್ಲೋಡಿ -ಪಂಜ ಇದರ ವಾರ್ಷಿಕ ನೇಮ ನಡಾವಳಿ ಮತ್ತು ನಾಗತಂಬಿಲ ಏ.4ರಿಂದ ಏ.5.ತನಕ ನಡೆಯಿತು.
ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ ಇವರ ವತಿಯಿಂದ ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಪ್ರಯುಕ್ತ ಏ.4ರಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶಿವರಾಮಯ್ಯ ಕರ್ಮಾಜೆ ಧಾರ್ಮಿಕ ಉಪನ್ಯಾಸ ನೀಡಿ.”ನಮ್ಮ ಆಚಾರ, ವಿಚಾರಗಳು ಧರ್ಮ ಸೂಕ್ಷ್ಮತೆಯ ಅಡಿಯಲ್ಲಿ ಬರಬೇಕು. ಮಗು ದೇವರ ಸ್ವರೂಪ. ಅದು ನಿರ್ಗುಣವಾಗಿರುತ್ತದೆ. ಮಗುವಿಗೆ ಧರ್ಮದ ಸಂಸ್ಕೃತಿಯ ಚೌಕಟ್ಟಿನಲ್ಲಿಯೇ ಶಿಕ್ಷಣ ನೀಡಿ ಬೆಳೆಸಿ, ಪ್ರತಿಭಾವಂತರನ್ನಾಗಿ ಮಾಡಬೇಕು. ಈ ಮೂಲಕ ಭಾರತವು ಜಗತ್ತಿಗೆ ಗುರುವಾಗಿ. ಜಗತ್ತಿನಲ್ಲೆಲ್ಲರನ್ನು ಶ್ರೇಷ್ಠರನ್ನಾಗಿ ಮಾಡುವ ಉದ್ದೇಶ ಈಡೇರುವುದು” ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಶುಭ ಹಾರೈಸಿದರು.


ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಕಲಾ ರಂಗದ ಗೌರವಾಧ್ಯಕ್ಷ ನೇಮಿರಾಜ ಪಲ್ಲೋಡಿ,
,ಲಕ್ಷ್ಮೀಶ ಗಾಂಭೀರ ದೇವಸ್ಯ ತಳಮನೆ ಪಲ್ಲೋಡಿ, ಶ್ರೀ ಉಳ್ಳಾಕುಲು ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ , ಕಲಾರಂಗದ ಕಾರ್ಯದರ್ಶಿ ಪ್ರದೀಪ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪುರಸ್ಕಾರ : ಎಸ್ ಎಸ್ ಎಲ್ ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡ ವಿದ್ಯಾರ್ಥಿಗಳಾದ ಚೈತನ್ಯ ಪಲ್ಲೋಡಿ ಮತ್ತು
ಜೀವಿತ್ ಪಲ್ಲೋಡಿ ಯವರನ್ನು ಪುರಸ್ಕಾರಿಸಲಾಯಿತು .


ಕಾರ್ಯಕ್ರಮದಲ್ಲಿ ಶ್ರೀಮತಿ ನಿವೇದಿತ ಪಲ್ಲೋಡಿ ಪ್ರಾರ್ಥಿಸಿದರು. ಅವಿನಾಶ್ ಪಲ್ಲೋಡಿ ಸ್ವಾಗತಿಸಿದರು.ನೇಮಿರಾಜ ಪಲ್ಲೋಡಿ ಪ್ರಾಸ್ತಾವಿಕಗೈದರು.
ಶ್ರೀಮತಿ ಧನ್ಯತಾ ಬಾಲಕೃಷ್ಣ ಪಲ್ಲೋಡಿ ಮತ್ತು ಬಾಲಕೃಷ್ಣ ಪಲ್ಲೋಡಿ ಸನ್ಮಾನಿತರ ಪರಿಚಯಿಸಿದರು.ಪ್ರಕಾಶ್ ಜಾಕೆ ನಿರೂಪಿಸಿದರು. ಪ್ರದೀಪ್ ಪಲ್ಲೋಡಿ ವಂದಿಸಿದರು.


ಧಾರ್ಮಿಕ ಕಾರ್ಯಕ್ರಮಗಳು:


ಏ.4.ರಂದು ನಾಗತಂಬಿಲ, ಕಲಶ ಶುದ್ಧಿ ಮತ್ತು ಸಾಮೂಹಿಕ ನಾಗತಂಬಿಲ ಸೇವೆ. ಶ್ರೀ ಉಳ್ಳಾಕುಲು ಚಾಮುಂಡಿ ದೈವಸ್ಥಾನದಲ್ಲಿ ಕಲಶ ಶುದ್ಧಿ ಮತ್ತು ತಂಬಿಲ ಸೇವೆ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆ, ಅನ್ನಸಂತರ್ಪಣೆ ಜರಗಿತು.ಸಂಜೆ ಭಜನಾ ಕಾರ್ಯಕ್ರಮ. ಅನ್ನಸಂತರ್ಪಣೆ.ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯುವುದು. ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ತರುವುದು.ಎ.5ರಂದು ಪ್ರಾತಃ ಕಾಲದಲ್ಲಿ ಶ್ರೀ ಉಳ್ಳಾಕುಲು ದೈವದ ನೇಮ. ಮುಂಜಾನೆ ಶ್ರೀ ಅಣ್ಣಪ್ಪ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ. ಶ್ರೀ ರುದ್ರಚಾಮುಂಡಿ ದೈವದ ನೇಮ, ಶ್ರೀ ಚಾಮುಂಡಿ ದೈವದ ನೇಮ ಜರುಗಿತು.ಮಧ್ಯಾಹ್ನ ಪ್ರಸಾದ ವಿತರಣೆ. ಅನ್ನಸಂತರ್ಪಣೆ , ಸಂಜೆ ಗುಳಿಗ ದೈವದ ನೇಮ ಜರುಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ :


ಎ.4ರಂದು ಸಂಜೆ ಕೂಡುಕಟ್ಟಿನ ಮಕ್ಕಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ. ಪಂಜ ಶ್ರೀ ಶಾರದಂಬಾ ಯಕ್ಷಗಾನ ಕಲಾ ಕ್ಷೇತ್ರದ ವಿದ್ಯಾರ್ಥಿಗಳಿಂದ ಯಕ್ಷಮಣಿ ಗಿರೀಶ್ ಗಡಿಕಲ್ಲು ನಿರ್ದೇಶನದ
ಕನ್ನಡ ಪೌರಾಣಿಕ ಯಕ್ಷಗಾನ ಬಯಲಾಟ’ ಕದಂಬ ಕೌಶಿಕೆ’ ದರ್ಶನ ನಡೆಯಿತು.