ಅನಾಹುತಗಳಿಗೆ ಆಹ್ವಾನಿಸುತ್ತಿದೆ ಕಾಂತಮಂಗಲ ರಸ್ತೆ

0

ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ

ಸುಳ್ಯ ದಿಂದ ಅಜ್ಜಾವರ ಸಂಪರ್ಕಿಸುವ ಮುಖ್ಯರಸ್ತೆ ಕಾಂತಮಂಗಲ ಸೇತುವೆಯಿಂದ ಅಲ್ಪ ದೂರದಲ್ಲಿ ರಸ್ತೆಯ ಎರಡು ಭಾಗಗಳಲ್ಲಿ ಬೃಹತ್ ಕಂದಕಗಳಿದ್ದು ವಾಹನ ಸವಾರರಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಈ ಭಾಗದ ಕಾಂಕ್ರೀಟ್ ರಸ್ತೆಯು ಎರಡು ಭಾಗದಲ್ಲಿಯೂ ಕೂಡ ಕಂದಕಕ್ಕೆ ತೀರ ಹತ್ತಿರದಲ್ಲಿದ್ದು ಇಲ್ಲಿ ಯಾವುದೇ ತಡೆ ಬೇಲಿ ಯಾಗಲಿ, ಅಥವಾ ಯಾವುದೇ ಸೂಚನೆ ಫಲಕವಾಗಲಿ ಕಂಡು ಬರುತ್ತಿಲ್ಲ.


ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚರಿಸುವಾಗ ಯಾವುದಾದರೂ ಘನ ವಾಹನಗಳು ಬಂದಲ್ಲಿ ಮತ್ತೊಂದು ವಾಹನ ಸೈಡ್ ಕೊಡುವ ಭರದಲ್ಲಿ ಕಂದಕಕ್ಕೆ ಉರುಳುವ ಎಲ್ಲಾ ಮುನ್ಸೂಚನೆಗಳು ಕಂಡುಬರುತ್ತದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ.