ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಬಂದ ಕೇಂದ್ರ ಪೊಲೀಸ್ ಮೀಸಲು ಪಡೆ

0

ಇದೇ ಬರುವ ವಿಧಾನಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ನಿಯೋಜಿಸಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತುಕಡಿ ಇಂದು ಸುಳ್ಯಕ್ಕೆ ಆಗಮಿಸಿದೆ. ಈ ತುಕಡಿಯಲ್ಲಿ ಅಧಿಕಾರಿಗಳು ಸೇರಿ ಸುಮಾರು 75 ಮಂದಿಯ ತಂಡ ಸುಳ್ಯದಲ್ಲಿ ಚುನಾವಣಾ
ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇವರ ಕಾರ್ಯದ ಬಗ್ಗೆ ಮಾಹಿತಿ ನೀಡಿರುವ ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಸಿಎಂ ಇನ್ನೂ 3 ಬೆಟಾಲಿಯನ್ ಸುಳ್ಯಕ್ಕೆ ಆಗಮಿಸಲಿದ್ದು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ಸುಮಾರು 400 ಮಂದಿ ಮೀಸಲು ಪಡೆ ಆಗಮಿಸಲಿದೆ. ಮೀಸಲು ಪಡೆ ಸಿಬ್ಬಂದಿಗಳನ್ನು ಚುನಾವಣಾ ಸಂಬಂಧ ಗಡಿಗಳಲ್ಲಿ ತೆರೆದ ಚೆಕ್‌ಪೋಸ್ಟ್‌‌ಗಳಲ್ಲಿ ನಿಯೋಜಿಸಲಾಗುವುದು. ಸುಳ್ಯ ವಿಧಾನಸಭಾ ಕ್ಷೇತ್ರದ ಅಂತರ್ ರಾಜ್ಯ ಹಾಗು ಅಂತರ್ ಜಿಲ್ಲಾ ಗಡಿಗಳಲ್ಲಿ 6 ಚೆಕ್ ಪೋಸ್ಟ್ ತೆರೆಯಲಾಗಿದ್ದು ಇಲ್ಲಿ ತಪಾಸಣೆಗೆ, ಭದ್ರತೆಗೆ ಸಿಆ್‌ಪಿಎಫ್ ಪಡೆಗಳನ್ನು ಕಳುಹಿಸಲಾಗುತ್ತದೆ.
ಇವಿಎಂ ಮೆಷಿನ್‌ ಇಡುವ ಸ್ಟ್ರಾಂಗ್ ರೂಂ ಭದ್ರತೆಗೂ ಇವರನ್ನು ನೇಮಕ ಮಾಡಲಾಗುವುದು. ಅಲ್ಲದೆ ಚುನಾವಣಾ ಸಂದರ್ಭಗಳಲ್ಲಿ ಮತದಾನ ಕೇಂದ್ರಗಳಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದೀಗ ಸುಳ್ಯದ ಕಾಂತಮಂಗಲ ವಿದ್ಯಾರ್ಥಿ ನಿಲಯದಲ್ಲಿ ಇವರಿಗೆ ತಂಗುವ ವ್ಯವಸ್ಥೆಗಳನ್ನು ಮಾಡಲಾಗಿದ್ದು ಅವರಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳು,ಸಿದ್ಧತೆಗಳನ್ನು ಇಲಾಖೆ ವತಿಯಿಂದ ಮಾಡಿಕೊಡಲಾಗಿದೆ.