ಅಜ್ಜಾವರ ಮಹಿಷಮರ್ದಿನೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

0

ಅಜ್ಜಾವರ ಗ್ರಾಮದ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಎ.4 ರಂದು ಆರಂಭಗೊಂಡಿದ್ದು, ಎ.9ರವರೆಗೆ ನಡೆಯಲಿದೆ.
ಎ.4ರಂದು ಪೂರ್ವಾಹ್ನ ಉಗ್ರಾಣ ತುಂಬಿಸುವುದು ನಡೆಯಿತು.


ಎ.5ರಂದು ನವಕ, ಗಣಹೋಮ, ನಡೆದು, ಸಂಜೆ ಸ್ಥಳೀಯರಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ನಡೆಯಿತು.
ರಾತ್ರಿ ಶ್ರೀ ಭೂತಬಲಿ ನಡೆದು, ದೈವಗಳ ತಂಬಿಲ ಬಳಿಕ ಅನ್ನಸಂತರ್ಪಣೆ ನಡೆಯಿತು. ನಂತರ ಸಿಡಿಮದ್ದಿನ ಪ್ರದರ್ಶನ ನಡೆಯಿತು.


ಎ.6ರಂದು ಬೆಳಗ್ಗೆ ದರ್ಶನ ಬಲಿ ನಡೆದು, ಬಟ್ಟಲು ಕಾಣಿಕೆ ಮತ್ತು ಗಡಿಪ್ರಸಾದ, ಮಂತ್ರಾಕ್ಷತೆ, ಸಂಪ್ರೋಕ್ಷಣೆ ನಡೆಯಿತು.


ಎ.೮ರಂದು ರಾತ್ರಿ ತೊಡಙಲ್ ನಡೆಯಲಿದ್ದು, ರಾತ್ರಿ ೮ ರಿಂದ ಶ್ರೀ ಭುವನೇಶ್ವರೀ ಯಕ್ಷಗಾನ ಕಲಾಮಂಡಳಿ ಸುಳ್ಯ ಇದರ ಹಿರಿಯ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.೯ರಂದು ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುವುದು. ಜಾತ್ರೋತ್ಸವದ ಪ್ರಯುಕ್ತ ಪ್ರತಿ ದಿನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯುವುದು.