ಜಟ್ಟಿಪಳ್ಳ ಬೊಳಿಯಮಜಲು ಶಿರಾಡಿ ರಾಜನ್ ದೈವಸ್ಥಾನ ನೆಮೋತ್ಸವಕ್ಕೆ ಸಮವಸ್ತ್ರ ವಿತರಣೆ

0


ಶಿರಾಡಿ ರಾಜನ್ ದೈವಸ್ಥಾನ ಬೊಳಿಯಮಜಲು ಜಟ್ಟಿಪಳ್ಳ ನೆಮೋತ್ಸವವು ಏ.10ರಂದು ನಡೆಯಲಿದ್ದು, ಇದರ ಸಮಿತಿಯವರಿಗೆ ಸಮವಸ್ತ್ರದ ವಿತರಣೆಯು ಏ.8ರಂದು ರಘುನಾಥ ಜಟ್ಟಿಪಳ್ಳ ಅಧ್ಯಕ್ಷರು ಉತ್ಸವ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮವಸ್ತ್ರವನ್ನು ಗೌರವಾಧ್ಯಕ್ಷ ಮೋನಪ್ಪ ಗೌಡ ಅಡ್ಕಬಳೆ, ನವೀನ ಕಜೆ, ಸಮಿತಿಯ ಪದಾಧಿಕಾರಿಗಳಿಗೆ ವಿತರಿಸಿದರು. ಈ ಸಂಧರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕುಲ್ದೀಪ್ ಪೆಲ್ತಡ್ಕ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಜಟ್ಟಿಪಳ್ಳ, ಉತ್ಸವ ಸಮಿತಿ ಕಾರ್ಯದರ್ಶಿ ತೀರ್ಥಪ್ರಸಾದ್ ಜಟ್ಟಿಪಳ್ಳ, ಆಡಳಿತ ಸಮಿತಿ ಪ್ರಧಾನ ಕೋಶಾಧಿಕಾರಿ ಪರಮೇಶ್ವರ ಪಿ. ಕೆ, ಉತ್ಸವ ಸಮಿತಿ ಉಪಾಧ್ಯಕ್ಷ ಶಂಕರ ಪಾಂಡಿ, ಉತ್ಸವ ಸಮಿತಿ ಕೋಶಾಧಿಕಾರಿ ಚೇತನ್ ಜಟ್ಟಿಪಳ್ಳ ವಿವಿಧ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.,