ಬೆಳ್ಳಾರೆ ; ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಕ್ ಗೆ ಡಿಕ್ಕಿ – ಅಪಾಯದಿಂದ ಪಾರು

0

ಬೆಳ್ಳಾರೆ ಬಸ್ಸು ನಿಲ್ದಾಣದ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಕ್ ಗೆ ಡಿಕ್ಕಿಯಾದ ಘಟನೆ ಎ.12 ರಂದು ನಡೆದಿದೆ.
ಪುತ್ತೂರು ಕಡೆಯಿಂದ ಬೆಳ್ಳಾರೆ ಬಸ್ ನಿಲ್ದಾಣಕ್ಕೆ ಬಂದ ಬಸ್ಸು ಬಸ್ ನಿಲ್ದಾಣದಲ್ಲಿ ತಿರುಗಿಸುವ ವೇಳೆ ಬೈಕ್ ಗೆ ಡಿಕ್ಕಿಯಾಯಿತು.
ಪರಿಣಾಮ ಶಾಲಾ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ರಸ್ತೆಗೆ ಪಲ್ಟಿಯಾಯಿತು.
ಅದೃಷ್ಟವಶಾತ್ ವಿದ್ಯಾರ್ಥಿಗೆ ಯಾವುದೇ ಗಾಯವಾಗಿಲ್ಲ.
ಬೈಕ್ ಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.