ಇಂದು ಜಾಲ್ಸೂರು ಗ್ರಾಮದ ಗ್ರಾಮದೈವ ದಾಲ್ಸೂರಾಯಿ ದೈವದ ಪ್ರತಿಷ್ಠಾವಾರ್ಷಿಕೋತ್ಸವ, ದೈವಗಳ ನೇಮೋತ್ಸವ

0

ಜಾಲ್ಸೂರು ಗ್ರಾಮದ ಗ್ರಾಮ ದೈವ ಅರಿಯಡ್ಕ ಶ್ರೀ ದಾಲ್ಸೂರಾಯಿ ದೈವ ಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವವು ಇಂದು ನಡೆಯಲಿದೆ.
ಇಂದು
ಬೆಳಿಗ್ಗೆ ಶ್ರೀ ವನಶಾ ಸ್ತಾವು ದೇವರ ಪೂಜೆ, ಗುಳಿಗ ತಂಬಿಲ, ನಾಗತಂಬಿಲ ಹಾಗೂ ಶ್ರೀ ದಾಲ್ಸೂರಾಯಿ ದೈವದ ತಂಬಿಲ, ಪ್ರಸಾ ದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಭಂಡಾರ ತೆಗೆದು ಶ್ರೀ ದಾಲ್ಸೂರಾಯಿ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ, ಬಳಿಕ ಗುಳಿಗ ದೈವದ ಕೋಲ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ರವೀಂದ್ರ ಗೌಡ ಅರಿಯಡ್ಕ ತಿಳಿಸಿದ್ದಾರೆ.