ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ೧೯ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯುತ್ತಿದ್ದು ನಿನ್ನೆ ಸಂಜೆ ನಾಮಾರ್ಚನೆ (ಭಜನೆ) ನಡೆಯಿತು. ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ ಕಾಯರ್ತೋಡಿ, ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಸೂರ್ತಿಲ ಕಾಯರ್ತೋಡಿ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಾಯರ್ತೋಡಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.


ಸಂಜೆ ದೀಪಾರಾಧನೆ, ಶ್ರೀ ದುರ್ಗಾ ನಮಸ್ಕಾರ ಪೂಜೆ ರಾತ್ರಿ ಅನ್ನಪ್ರಸಾದ ನಡೆಯಿತು.
ಈ ಸಂದರ್ಭದಲಲಿ ಆಡಳಿತ ಮಂಡಳಿಯವರು, ಊರ ಹಾಗೂ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದು, ದೇವರ ಗಂಧ ಪ್ರಸಾದ ಸ್ವೀಕರಿಸಿದರು.
ಇಂದು ಬೆಳಿಗ್ಗೆ ಗಣಪತಿ ಹವನ, ಗುರು ಪೂಜೆ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿರುವುದು.