ಅರಂತೋಡು: ಕೌಶಲ್ಯ ತರಬೇತಿ ಶಿಬಿರ

0


ನೆಹರು ಮೆಮೋರಿಯಲ್ ಕಾಲೇಜ್ ಕಾಲೇಜು ಸುಳ್ಯ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಜಂಟಿ ಆಶ್ರಯದಲ್ಲಿ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ”ಎಂಬ ಶೀರ್ಷಿಕೆಯಡಿ ಯಲ್ಲಿ ನಾಲ್ಕು ದಿನದ ಕೌಶಲ್ಯ ತರಬೇತಿ ಶಿಬಿರವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ಉದ್ಘಾಟನೆಗೊಂಡಿತು.


ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು: ಕೌಶಲ್ಯ ತರಬೇತಿ ಶಿಬಿರ
ನೆಹರು ಮೆಮೋರಿಯಲ್ ಕಾಲೇಜ್ ಕಾಲೇಜು ಸುಳ್ಯ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಜಂಟಿ ಆಶ್ರಯದಲ್ಲಿ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ”ಎಂಬ ಶೀರ್ಷಿಕೆಯಡಿ ಯಲ್ಲಿ ನಾಲ್ಕು ದಿನದ ಕೌಶಲ್ಯ ತರಬೇತಿ ಶಿಬಿರವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ಉದ್ಘಾಟನೆಗೊಂಡಿದೆ .


ಈ ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಶಾಲಾ ಮುಖ್ಯೋಪಾಧ್ಯಾಯರಾದ
ಗೋಪಾಲಕೃಷ್ಣ ಬಿ.ಕೆ ವಹಿಸಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಶಿಬಿರದಲ್ಲಿ ನಡೆಯುವ ಮೂರು ತರಬೇತಿ ಚಟುವಟಿಕೆಯ ಬಗ್ಗೆ ಪರಿಚಯಿಸಿ ಆಧುನಿಕತೆ, ಕೌಶಲ್ಯ, ಜ್ಞಾನ ಮತ್ತು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್.ಎಂ.ಸಿ. ಸುಳ್ಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ, ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜು ಅರಂತೋಡುನಿವೃತ್ತ ಪ್ರಾಂಶುಪಾಲರಾದ ಗಂಗಾಧರ್ ಕೆ,ಆರ್, ಸುಳ್ಯ ಎನ್.ಎಂ.ಸಿ. ಪ್ರಾಂಶುಪಾಲರಾದ ರುದ್ರ ಕುಮಾರ್ ಎಂ.ಎಂ, ಎನ್.ಎಂ ಸಿ ಸುಳ್ಯ ಇದರ ಆಂತರಿಕ ಗುಣಮಟ್ಟ ಖಾತರಿಕೋಶ ಸಂಯೋಜಕಿ ಮಮತಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುಳ್ಯ ಎನ್.ಎಂ.ಸಿ. ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಕೃಪಾ ಎ.ಎನ್ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಾಜ ಕಾರ್ಯ ಸಂಘದ ಸಂಯೋಜಕಿ ಶ್ರೀಮತಿ ಶೋಭಾ ಅತಿಥಿಗಳನ್ನು ವಂದಿಸಿದರು. ತೃತೀಯ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಕೃತಿ ಕೆ.ಎಚ್ ಮತ್ತು ಪ್ರಥಮ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತಿಯಲ್ಲಿ ಒಟ್ಟು110 ಶಿಬಿರಾರ್ಥಿಗಳು ನೋಂದಾವಣೆಗೊಂಡಿದ್ದು. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗಳು ನಡೆಯುತಿದೆ‌.