ಬಾಳುಗೋಡು : ಪನ್ನೆ ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ

0

ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಸ್ಥಾನ ಪನ್ನೆ ಬಾಳುಗೋಡು ಇದರ ವಾರ್ಷಿಕ ನೇಮೋತ್ಸವವು ಎ. 30 ಹಾಗೂ ಮೇ. 1ರಂದು ನಡೆಯಿತು.

ಎ.30 ರಂದು ಬೆಳಿಗ್ಗೆ ಗಣಹೋಮ,ಸಂಜೆ ಮಾಡಕ್ಕೆ ಭಂಡಾರ ಹೊಗಿ ಮೇ.1 ರಂದು ಬೆಳಿಗ್ಗೆ ಶ್ರೀ ಇರ್ವರು ಉಳ್ಳಾಕುಲು ಮತ್ತು ಸಪರಿವಾರ ದೈವಗಳ ನೇಮ ನಡೆಯಿತು. ಮದ್ಯಾಹ್ನ ಪ್ರಸಾದ ವಿತರಣೆ ಹಾಗು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳು, ಊರ ಪರವೂರ ಭಕ್ತದಿಗಳು ಹಾಜರಿದ್ದರು.