ಬಿಜೆಪಿ ಕೊಡಗು ಜಿಲ್ಲಾ ಸಮಿತಿಗೆ ನಂಜಪ್ಪ ನಿಡ್ಯಮಲೆ ಆಯ್ಕೆ

0

ಹಲವು ವರ್ಷಗಳ ಪಕ್ಷ ಸಂಘಟನೆಗಾಗಿ ಬಿಜೆಪಿ ಜಿಲ್ಲಾಧ್ಯಕ್ಷರಿಂದ ನೇಮಕ

ಪೆರಾಜೆ ಗ್ರಾಮದ ನಿಡ್ಯಮಲೆ ನಂಜಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಕೊಡಗು ಜಿಲ್ಲಾ ಬಿಜೆಪಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ನಂಜಪ್ಪ ನಿಡ್ಯಮಲೆ ಅವರು ಪೆರಾಜೆ ಗ್ರಾಮ ಪಂಚಾಯತಿಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ, ಆಯ್ಕೆಯಾಗಿದ್ದು, ಎರಡು ಬಾರಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಗ್ರಾ.ಪಂ. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಂಜಪ್ಪ ನಿಡ್ಯಮಲೆ ಅವರು ಗ್ರಾಮಮಟ್ಟದಲ್ಲಿ ಪಕ್ಷಕ್ಕಾಗಿ ದುಡಿದ ಸೇವೆಯನ್ನು ಪರಿಗಣಿಸಿ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿ ಕಾಳಪ್ಪ ಅವರು ಅವರನ್ನು ಜಿಲ್ಲಾ ಸಮಿತಿಗೆ ಆಯ್ಕೆಗೊಳಿಸಿದ್ದಾರೆ.