ಕೋವಿ ಡೆಪಾಸಿಟ್ : ವಿನಾಯಿತಿ‌ ಕೋರಿ 640 ಮಂದಿ ಅರ್ಜಿ

0

ನಾಳೆ ವರದಿ ನೀಡಲು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸೂಚನೆ

ವಿಧಾನಸಭಾ ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ಇಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದು, ತಾಲೂಕಿನಲ್ಲಿ ವಿನಾಯಿತಿ ಕೋರಿ 640 ಮಂದಿ‌ ಅರ್ಜಿ ಸಲ್ಲಿಸಿದ್ದಾರೆ.
ಇಂದು ಈ‌ ಕುರಿತು ತಹಶಿಲ್ದಾರ್ ರ ಅಧ್ಯಕ್ಷ ತೆಯಲ್ಲಿ ಸಭೆ ನಡೆದಿದ್ದು, ನಾಳೆ ಬೆಳಗ್ಗೆ ವಿನಾಯಿತಿ ನೀಡುವ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಭೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಬೆಳೆ ರಕ್ಷಣೆ ಉದ್ದೇಶದಿಂದ ನಮಗೆ ಕೋವಿ ಡೆಪಾಸಿಟ್ ನಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ತಾಲೂಕು ಕಚೇರಿಯಲ್ಲಿ ಸಭೆ ನಡೆದಿದ್ದು, ಪೋಲೀಸ್, ಫಾರೆಸ್ಟ್, ತೋಟಗಾರಿಕೆ ಹಾಗೂ ಕೃಷಿ‌ಇಲಾಖೆಯವರಿದ್ದರು. 640 ಮಂದಿಯಲ್ಲಿ ಯಾರಿಗೆ ನೀಡಬಾರದೆಂಬ ವರದಿಯನ್ನು ನಾಳೆ ಬೆಳಗ್ಗೆ ಈ ನಾಲ್ಕು ಇಲಾಖೆಯವರು ನೀಡಬೇಕು. ಆ ವರದಿಯ ಆಧಾರದಲ್ಲಿ ಅವರಿಗೆ ವಿನಾಯಿತಿ ನೀಡಿ ಆ ವರದಿಯನ್ನು ಜಿಲ್ಲಾಧಿಕಾರಿ ಗಳಿಗೆ ನೀಡುವುದೆಂದು ಸಭೆ ನಿರ್ಧರಿಸಿದೆ.

ಅಂದ ಹಾಗೆ ಕೋವಿ ಡೆಪಾಸಿಟ್ ಇಡಲು ಎ.13 ಕೊನೆಯ ದಿನವಾಗಿದೆ. ಕ್ರಿಮಿನಲ್ ಕೇಸ್ ಇರುವವರಿಗೆ ಹಾಗೂ ಆತ್ಮ ರಕ್ಷಣೆಗಾಗಿ ಕೋವಿ ಇಟ್ಟುಕೊಂಡವರು ಕಡ್ಡಾಯವಾಗಿ ಡೆಪಾಸಿಟ್ ಮಾಡಬೇಕಾಗಿದೆ.