ನೆಲ್ಲೂರು ಕೆಮ್ರಾಜೆ : ಕಂಜಿಪಿಲಿ ಮತ್ತು ನೂಜಾಲದಲ್ಲಿ ನಡೆಯುತ್ತಿದ್ದ ಕಳ್ಳಬಟ್ಟಿ ಸಾರಾಯಿ‌ ಅಡ್ಡೆಗೆ ಅಬಕಾರಿ ದಾಳಿ

0

ನೆಲ್ಲೂರು ಕೆಮ್ರಾಜೆಯ ಕಂಜಿಪಿಲಿ ಮತ್ತು ನೂಜಾಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಎ.15ರಂದು ವರದಿಯಾಗಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ಕಂಜಿಪಿಲಿ ಬಾಲಕೃಷ್ಣ ಎಂಬವರ ಮನೆಗೆ ದಾಳಿ ನಡೆಸಿದ ಅಬಕಾರಿ ಪೋಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 27.720 ಲೀಟರ್ ಕಳ್ಳ ಬಟ್ಟಿ ಸಾರಾಯಿ ಹಾಗೂ 340 ಲೀಟರ್ ಗೇರು ಹಣ್ಣಿನ ಕೊಳೆರಸವನ್ನು ಹಾಗೂ ಕಳ್ಳಬಟ್ಟಿ ತಯಾರಿಕೆಗೆ ಉಪಯೋಗಿಸಿದ ಪರಿಕರಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ‌. ಹಾಗೂ ಇದೇ ಗ್ರಾಮದ ನೂಜಾಲ ವೀರಪ್ಪ ಗೌಡ ಎಂಬವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 12.500 ಲೀಟರ್ ಕಳ್ಳ ಬಟ್ಟಿ ಸಾರಾಯಿ ಮತ್ತು 50 ಲೀ. ಗೇರು ಹಣ್ಣಿನ ಕೊಳೆರಸ ಹಾಗೂ 30 ಲೀ. ಬೆಲ್ಲದ ಕೊಳೆರಸವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಜಯಾನಂದ ಬಿ., ಅಬಕಾರಿ ಕಾನ್ಸ್ಟೇಬಲ್ ಸಿಬ್ಬಂದಿಗಳಾದ ಪ್ರಮೋದ್ ಎಂ.ಆರ್., ಶರಣಪ್ಪ, ಯಮನೂರಪ್ಪ, ಮುಗಳಿ ಅಮರೇಶ ಹಾಗೂ ಕಂಜಿಪಿಲಿಯಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಬಕಾರಿ ಉಒ ನಿರೀಕ್ಷಕರಾದ ಮುನಾಫ್ ಸಾಹೇಬ್, ಸಿಬ್ಬಂದಿಗಳಾದ ಮಲ್ಲನಗೌಡ ಎಸ್. ಸೂಳಿಬಾವಿ, ಅಶೋಕ್ ಬಿ.ಎನ್., ಹಾಗೂ ವಾಹನ ಚಾಲಕ ರಘುನಾಥ, ಗಿರಿಮಲ್ಲಪ್ಪ, ಭಜಂತ್ರಿ ಸಹಕರಿಸಿದರು.