ಆಲೆಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ಪ್ರಚಾರ ಸಭೆ

0

ಆಲೆಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಭೆಯು ಎ.17 ರಂದು ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ ಯವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ಎಸ್.ಎನ್ ಮನ್ಮಥ ರವರು ಮಾತನಾಡಿ ಈ ಬಾರಿ ನೂತನ ಅಭ್ಯರ್ಥಿಯಾಗಿರುವ ಸಾಮಾನ್ಯ ಕಾರ್ಯಕರ್ತೆ ಮಹಿಳೆ ಭಾಗೀರಥಿ ಯವರ ಪರ ಮತಯಾಚಿಸಿ ಅಭೂತಪೂರ್ವ ಗೆಲುವಿಗೆ ಅವಿರತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುಂತೆ ಕರೆ ನೀಡಿದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಮಾತನಾಡಿ ಕಾರ್ಯಕರ್ತರು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ತಿಳಿಸಿದರು. ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯದ ಕುರಿತು ಪ್ರತಿ ಮನೆಗೆ ತೆರಳಿ ತಿಳಿಸುವ ಮೂಲಕ ಮತ ಯಾಚಿಸಬೇಕು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಹಿರಿಯ ಮುಖಂಡರಾದ ಎನ್.ಎ.ರಾಮಚಂದ್ರ, ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಜಗದೀಶ್ ಸರಳಿಕುಂಜ ಉಪಸ್ಥಿತರಿದ್ದರು.


ಪಕ್ಷದ ಮುಖಂಡರಾದ ಕೃಪಾಶಂಕರ ತುದಿಯಡ್ಕ, ದಿನೇಶ್ ಕಣಕ್ಕೂರು, ತೀರ್ಥಕುಮಾರ್ ಕುಂಚಡ್ಕ, ಧನಂಜಯ ಕುಂಚಡ್ಕ,ಎ.ಸಿ ವಸಂತ ಅರಂಬೂರು, ಅಚ್ಚುತ ಮಣಿಯಾಣಿ ಆಲೆಟ್ಟಿ, ಹರೀಶ್ ರಂಗತ್ತಮಲೆ, ವೈಕುಂಠ ನಾಯಕ್ ದೋಣಿಮೂಲೆ, ಎನ್.ಎ.ಗಂಗಾಧರ, ಸೀತಾರಾಮ ಕೊಲ್ಲರಮೂಲೆ, ಶಿವಾನಂದ ರಂಗತ್ತಮಲೆ, ‌ಸುಧಾಕರ ನಾಗಪಟ್ಟಣ, ಲತೀಶ್ ಗುಂಡ್ಯ, ತಂಗವೇಲು ನಾಗಪಟ್ಟಣ, ‌ಪ್ರದೀಪ್ ಕೊಲ್ಲರಮೂಲೆ,ಪ್ರಣೀತ್ ಕಣಕ್ಕೂರು, ನವೀನ್ ಕುಮಾರ್ ಆಲೆಟ್ಟಿ, ಪ್ರವೀಣ್ ಕಲ್ಲೆಂಬಿ,
ಗಂಗಾಧರ ಬಡ್ಡಡ್ಕ, ಪುಂಡರೀಕ‌ ಕಾಪುಮಲೆ, ನಾಗರಾಜ ಬಡ್ಡಡ್ಕ,
ವೀಣಾವಸಂತ ಆಲೆಟ್ಟಿ, ಭಾಗೀರಥಿ ಪತ್ತುಕುಂಜ, ಕಮಲ ನಾಗಪಟ್ಟಣ, ಸರೋಜಿನಿ ಬಾರ್ಪಣೆ,ಮನೋಹರ ಕಲ್ಲೆಂಬಿ, ಶೇಷಪ್ಪ ಪರಿವಾರಕಾನ, ಬಾಲಚಂದ್ರ ಬಾರ್ಪಣೆ, ಪುಷ್ಪರಾಜ ನಾಗಪಟ್ಟಣ, ಸನತ್ ಕುಂಚಡ್ಕ, ಜಗದೀಶ್ ನಾಗಪಟ್ಟಣ, ಗೋಪಾಲ ಸರಳಿಕುಂಜ,
ಶೃಂಗೇರಿ ವಿಸ್ತಾರಕ ಮನೀಷ್ ಪದೇಲ ಹಾಗೂ
ಆಲೆಟ್ಟಿ ಗ್ರಾಮದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಪ್ರವೀಣ್ ಕಲ್ಲೆಂಬಿ ಕಾರ್ಯಕ್ರಮ ನಿರೂಪಿಸಿದರು.