ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

0

ಶ್ರೀ ಬಸವೇಶ್ವರ ದೇವಸ್ಥಾನ, ಬಸವನಮೂಲೆ ಕುಲ್ಕುಂದ ಸುಬ್ರಹ್ಮಣ್ಯ ಇದರ ಜಾತ್ರಾ ಮಹೋತ್ಸವವು
ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಇಂದು ಮತ್ತು ನಾಳೆ
(ಏ.19 ಮತ್ತು ಎ.20 ರಂದು) ನಡೆಯಲಿದೆ.

ಇಂದು (ಎ.19 ರ) ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ
ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ ಸಂಜೆ ದೇವಸ್ಥಾನದಲ್ಲಿ ಪ್ರಾಸಾದ ಶುದ್ಧಿ ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಏ.20 ರ ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ಮಹಾಪೂಜೆ ನಡೆದು ಪೂರ್ವಾಹ್ನಾ 9 ರಿಂದ ಶತರುದ್ರಾಭಿಷೇಕ ಪ್ರಾರಂಭ ವಾಗಲಿದೆ. ಪರಿವಾರ ದೇವರುಗಳಿಗೆ ಕಲಶತಂಬಿಲ ಸೇವೆ, ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಗಂಟೆ 6.00ರಿಂದ ದೀಪಾರಾಧನೆ, ತಾಯಂಬಕ, ರಂಗಪೂಜೆ ರಾತ್ರಿ ಶ್ರೀ ಭೂತ ಬಲಿ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.