ಸುಳ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಂದಕುಮಾರ್ ನಾಮಪತ್ರ ಸಲ್ಲಿಕೆ ವಿಷಯಕ್ಕೆ ತೆರೆ ಎಳೆದ ಅವರ ಅಭಿಮಾನಿ ಬಳಗ

0

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಮಡಿಕೇರಿ ಮೂಲದ ಉದ್ಯಮಿ ಕೆಪಿಸಿಸಿ ಸಂಯೋಜಕ ಎಚ್. ಎಮ್. ನಂದಕುಮಾರ್ ಅವರಿಗೆ ಟಿಕೆಟ್ ವಂಚಿತಗೊಂಡಿರುವ ಬಗ್ಗೆ ಅವರ ಅಭಿಮಾನಿ ಬಳಗದಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರುಗಳು ಈ ವಿಷಯದ ಕುರಿತು ಮಧ್ಯ ಪ್ರವೇಶಿಸಿ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದರು. ಆದರೂ ಕೂಡ ಇದನ್ನು ಒಪ್ಪದ ನಂದಕುಮಾರ್ ಅಭಿಮಾನಿ ಬಳಗದ ಕಾಂಗ್ರೆಸ್ ಕಾರ್ಯಕರ್ತರು ನಂದಕುಮಾರ್ ಅವರಿಗೆ ಬಿ ಫಾರಂ ನೀಡದ ಹಿನ್ನೆಲೆಯಲ್ಲಿ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸುವ ಬಗ್ಗೆ ಮತ್ತು ನಾಮಪತ್ರ ಸಲ್ಲಿಸುವ ದಿನಾಂಕದ ಬಗ್ಗೆ ತೀರ್ಮಾನಗಳನ್ನು ಕೈಗೊಂಡಿದ್ದರು.
ಆದರೆ ಏಪ್ರಿಲ್ ೧೮ರಂದು ಸಂಜೆ ಕಡಬದಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅವರ ಅಭಿಮಾನಿ ಬಳಗದವರು ಮತ್ತು ನಂದಕುಮಾರ್ ರವರು ಈ ಬಾರಿಯ ಚುನಾವಣೆಯಲ್ಲಿ ತಟಸ್ಥರಾಗಿದ್ದು ಪಕ್ಷದ ಯಾವುದೇ ಕಾರ್ಯಾ ಚಟುವಟಿಕೆಯಲ್ಲಿ ಭಾಗವಹಿಸದೆ ಇರುವುದಾಗಿ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ತೀರ್ಮಾನವನ್ನು ತೆಗೆದುಕೊಳ್ಳುವ ಬಗ್ಗೆ ಕಳೆದ ದಿನಗಳಲ್ಲಿ ಎಣ್ಮೂರಿನಲ್ಲಿ ನಡೆದ ನಡೆದ ಅಭಿಮಾನಿ ಬಳಗದ ಸಮಾವೇಶದಲ್ಲಿ ತೀರ್ಮಾನಿಸಲಾಗಿತ್ತು . ಒಟ್ಟಿನಲ್ಲಿ ಸುಳ್ಯ ಕಾಂಗ್ರೆಸ್ಸಿನಲ್ಲಿ ಮೂಡಿದ್ದ ಸಂಚಲನಕ್ಕೆ ಅಲ್ಪಮಟ್ಟಿಗೆ ಬ್ರೇಕ್ ಬಿದ್ದಂತಾಗಿದೆ.