ಹರಿಹರ ಪಲ್ಲತಡ್ಕ ಪ್ರೌಢಶಾಲೆಯಿಂದ ಕಳ್ಳತನ

0

ಹರಿಹರ ಪಲ್ಲತಡ್ಕ ಸರಕಾರಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ ಬ್ಯಾಟರಿ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.

ಈ ಬಗ್ಗೆ ಇಲ್ಲಿನ ಮುಖ್ಯೋಪಾಧ್ಯಾಯ ರಾಮಚಂದ್ರ ಕಜ್ಜೋಡಿ ಅವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು ಏ. 15 ರಂದು ಶಾಲಾ ಕೊಠಡಿಗೆ ಬೀಗ ಹಾಕಿ ತೆರಳಿದ್ದು ಎ.18 ರಂದು ಶಾಲೆಗೆ ಬಂದಾಗ ಬಾಗಿಲಿನ ಬೀಗ ಒಡೆದಿರುವುದು ಗೊತ್ತಾಗಿದೆ. ಒಳ ಹೊಕ್ಕು ನೋಡಿದಾಗ ಕಂಪ್ಯೂಟರ್ ರೂಮ್ ನಿಂದ ಬ್ಯಾಟರಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.