ಸುಳ್ಯದಲ್ಲಿ ಉಚಿತ ವಾಲಿಬಾಲ್ ತರಬೇತಿ ಶಿಬಿರ ಉದ್ಘಾಟನೆ

0


ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ , ಮಂಗಳೂರು ವಿಶ್ವವಿದ್ಯಾನಿಲಯ, ಯುವ ಸಬಲೀಕರಣ ಇಲಾಖೆ ಮಂಗಳೂರು ಮತ್ತು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ ಸಹಯೋಗದೊಂದಿಗೆ ಸುಳ್ಯ ಹಾಗೂ ಕಡಬ ತಾಲೂಕಿನ ೧೮ ವಯೋಮಿತಿಯ ಕೆಳಗಿನ ಬಾಲಕ ಬಾಲಕಿಯರಿಗಾಗಿ ಸುಳ್ಯದ ಯುವಜನಾ ಸಂಯುಕ್ತ ಮಂಡಳಿ ಭವನದ ಬಳಿಯ ಕ್ರೀಡಾಂಗಣದಲ್ಲಿ ನಿನ್ನೆ ಉಚಿತ ವಾಲಿಬಾಲ್ ತರಬೇತಿ ಶಿಬಿರವು ಉದ್ಘಾಟನೆಗೊಂಡಿತು .


ಉದ್ಘಾಟನಾ ಸಮಾರಂಭದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲುರವರು ಅಧ್ಯಕ್ಷತೆ ವಹಿಸಿದ್ದರು . ಅತಿಥಿಗಳಾಗಿ ಎನ್. ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ ಗೌಡ , ನಿವೃತ್ತ ಪ್ರೊಫೆಸರ್ ಬಾಲಚಂದ್ರ ಗೌಡ, ಅಸೋಸಿಯೇಷನ್ ಗೌರವ ಅಧ್ಯಕ್ಷ ಶಂಸುದ್ದೀನ್, ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಟಿ ವಿಶ್ವನಾಥ , ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಲ, ಕೆ ಮುಸ್ತಫಾ ಸುಳ್ಯ, ಎ.ಸಿ. ವಸಂತ , ಹರಿಪ್ರಕಾಶ್ ಅಡ್ಕಾರ್ , ಮುಖ್ಯ ತರಬೇತುದಾರ ಮನೋಜ್ ಅಡ್ಕಾರ್ , ಇರ್ಫಾನ್ ಸುಳ್ಯ, ಸುದರ್ಶನ್ ಸುಳ್ಯ, ಇಬ್ರಾಹಿಂ ಸುಳ್ಯ, ಗೋಕುಲ್‌ದಾಸ್ ಸುಳ್ಯ, ಶ್ರೀಮತಿ ರಾಜೀವ್ ಲಾವಂತಡ್ಕ ,ನಿತಿನ್ ಗೂನಡ್ಕ, ವಿಶ್ವನಾಥ್ ಬೆಳ್ಳಾರೆ, ಶಹೀದ್ ಪಾರೆ ಉಪಸ್ಥಿತರಿದ್ದರು.


ಎನ್ ಜಯಪ್ರಕಾಶ್ ರೈ , ಪ್ರೊಫೆಸರ್ ಬಾಲಚಂದ್ರ ಗೌಡ, ಎನ್ ಎ ರಾಮಚಂದ್ರ ಗೌಡ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು, ಸಂದರ್ಭದಲ್ಲಿ ಸುಮಾರು ೧೩೦ ಶಿಬಿರಾರ್ಥಿಗಳು ಹಾಗೂ ಅವರ ಪೋಷಕರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೊಡ್ಡಣ್ಣ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಗಪ್ಪ ಬೆಳ್ಳಾರೆ ಸ್ವಾಗತಿಸಿ, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ವಂದಿಸಿದರು.

ತರಬೇತಿಯಲ್ಲಿ ೧೩೦ ಶಿಬಿರಾರ್ಥಿಗಳು ಭಾಗವಹಿಸಿದ್ದು ಇವರಲ್ಲಿ ೧೦೩ ಬಾಲಕ ಹಾಗೂ ೨೭ ಬಾಲಕಿಯರು ಈ ಒಂದು ಶಿಬಿರದ ಪ್ರಯೋಜನ ಪಡೆದುಕೊಳ್ಳಲಿದ್ದಾರೆ . ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಸಂಜೆ ಉಚಿತ ಉಪಹಾರದ ವ್ಯವಸ್ಥೆಯನ್ನು ಸಂಸ್ಥೆಯಿಂದ ಒದಗಿಸಲಾಗಿದೆ. ತರಬೇತಿಯು ಮುಂಜಾನೆ ೬.೩೦ರಿಂದ ೯.೦೦ ಮತ್ತು ಸಂಜೆ ೪:೩೦ ರಿಂದ ೬:೪೫ ತನಕ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.