ದ್ವಿತೀಯ ಪಿಯುಸಿ ಫಲಿತಾಂಶ : ಸುಳ್ಯ ರೋಟರಿ ವಿದ್ಯಾಸಂಸ್ಥೆಗೆ ಶೇ.100

0

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸಂಸ್ಥೆಗೆ ಶೇ.100 ಫಲಿತಾಂಶ ದಾಖಲಾಗಿದೆ.

ವಿಜ್ಞಾನ‌ ವಿಭಾಗದಲ್ಲಿ 24 ಮಂದಿ‌ ಪರೀಕ್ಷೆ ಬರೆದು ಎಲ್ಲರೂ ತೇರ್ಗಡೆಯಾಗಿದ್ದಾರೆ. ದೃತಿ ಕೆದಿಲಾಯ 578 ಅಂಕ‌ ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ. ಪ್ರಣಮ್ 568 ಅಂಕಗಳೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.