ಮುಗುಪ್ಪುವಿನಲ್ಲಿ ಸ್ವಾಮಿ ಕೊರಗಜ್ಜ ನೇಮೋತ್ಸವ

0

ಮುಪ್ಪೇರ್ಯ ಗ್ರಾಮದ ಮುಗುಪ್ಪು ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಏ. 20ರಂದು ಸಂಜೆ ನಡೆಯಿತು, ಸಂಜೆ ಕೊರಗಜ್ಜನ ಭಂಡಾರ ತೆಗೆದ ನಂತರ ಅನ್ನಸಂತರ್ಪಣೆ, ಅಜ್ಜನ ನೇಮೋತ್ಸವ ನಡೆಯಿತು. ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬಾಬು ಎಮ್. ಮುಗುಪ್ಪು, ಕಾರ್ಯದರ್ಶಿ ಜಯರಾಮ ಕೆ. ಮರುವಂಜ, ಉಪಾಧ್ಯಕ್ಷರುಗಳಾದ ಪುತ್ರ ಮುಗುಪ್ಪು, ಚನಿಯ ಮುಗುಪ್ಪು, ಜೊತೆ ಕಾರ್ಯದರ್ಶಿ ಬಾಬು ಮರುವಂಜ ಮತ್ತು ಸಮಿತಿಯ ಸದಸ್ಯರು, ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಅಧ್ಯಕ್ಷ ವಿಶ್ವನಾಥ ರೈ ಮರುವಂಜ, ಕಾರ್ಯದರ್ಶಿ ಪ್ರಭಾಕರ ರೈ ಮರುವಂಜ, ಉಪಾಧ್ಯಕ್ಷ ಸುನಿಲ್ ಕುಮಾರ್ ಮುಗುಪ್ಪು, ಉಮೇಶ್ ರೈ ಮರುವಂಜ, ಆನಂದ ಗೌಡ ಕೊಡಪಾಲ, ಮುಗುಪ್ಪು, ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಜ್ಜನ ಕರಿಗಂಧ ಪ್ರಸಾದ ಸ್ವೀಕರಿಸಿದರು.