ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯರಾಗಿ ಸಿದ್ದೀಕ್ ಕಟ್ಟೆಕ್ಕಾರ್ಸ್ ಆಯ್ಕೆ

0

ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಇದರ ವಾರ್ಷಿಕ ಮಹಾಸಭೆ ಹಾಸನ ಜಿಲ್ಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸಮಿತಿಯ ಸದಸ್ಯರಾಗಿ ಸುಳ್ಯದ ಎಸ್ ವೈ ಎಸ್ ಮತ್ತು ಎಸ್ ವೈ ಎಸ್ ಸಂಘಟನೆಗಳ ಮುಖಂಡ, ಸಾಮಾಜಿಕ ಕಾರ್ಯಕರ್ತ ದಿ.ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ರವರ ಪುತ್ರ ಅಬೂಬಕ್ಕರ್ ಸಿದ್ದೀಕ್ ಕಟ್ಟಿಕ್ಕಾರ್ಸ್ ರವರನ್ನು ಆಯ್ಕೆ ಮಾಡಲಾಗಿದೆ.


ಅವರು ಪ್ರಸ್ತುತ ಸುಳ್ಯ ಎಸ್ ವೈ ಎಸ್ ಗಾಂಧಿನಗರ ಯೂನಿಟ್ ಇದರ ಸದಸ್ಯರಾಗಿ, ಎಸ್ ವೈ ಎಸ್ ಸುಳ್ಯ ಸರ್ಕಲ್ ಸಮಿತಿ ಸದಸ್ಯರಾಗಿ, ಸುಳ್ಯ ಝೋನಲ್ ಕೋಶಾಧಿಕಾರಿಯಾಗಿ, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಸದಸ್ಯರಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.