ಪಂಜ-ಅಳ್ಪೆ ಚಿಂಗಾಣಿಗುಡ್ಡೆ ದೈವಸ್ಥಾನದಲ್ಲಿ ವಾರ್ಷಿಕ ತಂಬಿಲ-ನೇಮೋತ್ಸವ

0

🔸 ಶ್ರೀ ಉಳ್ಳಾಕುಲು ನೇಮ


ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು-ಶ್ರೀ ಉಳ್ಳಾಲ್ತಿ,ಮಹಿಷಂತಾಯ ಹಾಗೂ ಪರಿವಾರ ದೈವಗಳ ದೇವಸ್ಥಾನದಲ್ಲಿ ಶ್ರೀ ಉಳ್ಳಾಕುಲು, ಉಳ್ಳಾಲ್ತಿ ಮತ್ತು ಶ್ರೀ ಮಹಿಷಂತಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ತಂಬಿಲ ಮತ್ತು ನೇಮೋತ್ಸವ ಎ.23 ಮತ್ತು ಎ24 ರಂದು ಜರುಗಲಿದೆ.
.ಎ.23 ರಂದು ಗಣಪತಿ ‌ಹವನ, ವಾರ್ಷಿಕ ತಂಬಿಲ ಸೇವೆ ಜರುಗಿತು. ಸಂಜೆ ಭಂಡಾರ ತೆಗೆಯುವುದು, ಭಜನಾ ಕಾರ್ಯಕ್ರಮ, ಅನ್ನಸಂಪರ್ಪಣೆ, ರಾತ್ರಿ ಶ್ರೀ ಅರಸು ಉಳ್ಳಾಕುಲು ಶ್ರೀ ಮಹಿಷಂತಾಯ, ಶ್ರೀ ವರ್ಣಾರ ಪಂಜರ್ಲಿ ದೈವಗಳ ನೇಮ ನಡೆಯಿತು.

ಎ.24 ರಂದು ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ.ಶ್ರೀ ಉಳ್ಳಾಕುಲು ದೈವದ ನೇಮ ನಡೆಯಿತು.ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ ಗಂಟೆ 3 ರಿಂದ ಶ್ರೀ ಕುಪ್ಪೆ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ನೇಮ, ರಾತ್ರಿ ಗಂಟೆ 8ರಿಂದ ಪರಿವಾರ ದೈವಗಳ ಮತ್ತು ಶ್ರೀ ಧರ್ಮ ದೈವ ರುದ್ರ ಚಾಮುಂಡಿ ದೈವದ ನೇಮ ಜರುಗಲಿದೆ.