ಮಂಡೆಕೋಲು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೆ

0

ಇಂದು (ಎ.25) ದೇವರ ದರ್ಶನ ಬಲಿ

ನಾಳೆ (ಎ.26) ಉಳ್ಳಾಕುಲು ದೈವದ ನೇಮೋತ್ಸವ-ಅಡ್ಡಣ ಪೆಟ್ಟು

ಇತಿಹಾಸ ಪ್ರಸಿದ್ಧ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮಂಡೆಕೋಲು ಇದರ ವಾರ್ಷಿಕ ಜಾತ್ರೋತ್ಸವವು ಎ.15ರಂದು ಆರಂಭಗೊಂಡಿದ್ದು ಎ.26 ಬುಧವಾರದ ವರೆಗೆ ಅದ್ದೂರಿಯಾಗಿ ಜರುಗಲಿದೆ.


ಎ.15ರಂದು ಮುಹೂರ್ತದ ಗೊನೆ ಕಡಿಯುವುದರ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಎ.೨೩ರಂದು ಉಗ್ರಾಣ ತುಂಬಿಸುವ ಕಾರ್ಯ ನಡೆಯಿತು. ರಾತ್ರಿ ಶ್ರೀ ಸತ್ಯನಾರಾಯಣ ದೇವರ ಪೂಜೆ ಜರುಗಿತು.


ಎ.24ರಂದು ಸೋಮವಾರ ನವಕ, ಗಣಪತಿ ಹವನ, ಹರಕೆಯ ತುಲಾಭಾರ, ಮಹಾಪೂಜೆ ನಂತರ ಸಮಾರಾಧನೆ ನಡೆಯಿತು. ಅಪರಾಹ್ನ 3 ಗಂಟೆಗೆ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರಲಾಗುವುದು. ರಾತ್ರಿ ಭೂತಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ಜರುಗಿತು.


ಎ.25ರಂದು ಪೂರ್ವಾಹ್ನ ದೇವರ ದರ್ಶನ ಬಲಿ ಉತ್ಸವ, 11 ರಿಂದ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ದುರ್ಗಾಪೂಜೆ, ರಂಗಪೂಜೆ ಅದ್ದೂರಿಯಾಗಿ ನಡೆಯುವುದು.
ಎ.26ರಂದು ಪೂರ್ವಾಹ್ನ 9 ಕ್ಕೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ, 10.30 ಕ್ಕೆ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ನಂತರ ಸಿರಿಮುಡಿ ಪ್ರಸಾದ ವಿತರಣೆ ನಡೆಯುವುದು. ಬಳಿಕ ಉದ್ರಾಂಡಿ ಹಾಗೂ ಉಪದೈವಗಳ ಕೋಲ, ಅಪರಾಹ್ನ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಗೆ ಭಂಡಾರ ಹಿಂತಿರುಗುವುದು. ಜಾತ್ರೋತ್ಸವದ ಪ್ರಯುಕ್ತ ಪ್ರತೀ ದಿನ ಅನ್ನಸಂತರ್ಪಣೆಯೂ ನಡೆಯುವುದು