ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

0

ಅರ್ಧ ಏಕಾಹ ಭಜನೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ದೈವಗಳ ನೇಮೋತ್ಸವ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ವಾರ್ಷಿಕ ಜಾತ್ರೋತ್ಸವ ಎ.23 ಮತ್ತು ಎ.24 ರಂದು ನಡೆಯಿತು.

ಏ.23 ರ ಪೂರ್ವಾಹ್ನ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆದು, ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.


ಮುಂಜಾನೆ ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಅರ್ಧ ಏಕಾಹ ಭಜನೆ ನಡೆಯಿತು. ಸಂಜೆ ಮಂಗಳೋತ್ಸವದ ಬಳಿಕ ಮಕ್ಕಳ ಕುಣಿತ ಭಜನಾ ತಂಡದಿಂದ ನೃತ್ಯ ಭಜನೆ ನಡೆಯಿತು.


ರಾತ್ರಿ ಮಹಾಪೂಜೆ ಬಳಿಕ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ವಸಂತಕಟ್ಟೆಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಅದೇ ದಿನ ರಾತ್ರಿ ಹರಕೆಯ ಸೇವೆಯಾಗಿ ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ‌ ಮಲ್ಲ ಇದರಿಂದ “ಶ್ರೀ ದೇವಿ ಮಹಾತ್ಮೆ”. ಯಕ್ಷಗಾನ ನಡೆಯಿತು.


ಏ.24 ಪೂವಾಹ್ನ ಗಣಪತಿ ಹವನ, ಕಲಶ ಪೂಜೆ ಬಳಿಕ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆದು ಶ್ರೀ ಕ್ಷೇತ್ರದ ದೈವಗಳಾದ ಚಾಮುಂಡಿ ಅಮ್ಮ, ವರ್ಣಾರ ಪಂಜುರ್ಲಿ, ಪುರುಷ ದೈವ, ಕುಪ್ಪೆ ಪಂಜುರ್ಲಿ, ಭೂವಿ ಗುಳಿಗ, ರಾಹು ಗುಳಿಗ ದೈವಗಳ ನೇಮೋತ್ಸವ ನಡೆಯಿತು.

ವ್ಯವಸ್ಥಾಪನಾ ಸಮಿತಿಯವರು, ಅಭಿವೃದ್ಧಿ ಸಮಿತಿಯವರು, ಉತ್ಸವ ಸಮಿತಿಯವರು ಊರವರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.