ಆರೋಗ್ಯ ಮಾಹಿತಿ

0

ಮಧುಮೇಹ ತಡೆಗಟ್ಟುವುದು ಹೇಗೆ?

ಡಾ. ನಿಶಾಂತ್ ಆರ್ನೋಜಿ

ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು.
ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ. ಒಮ್ಮೆ ಈ ಕಾಯಿಲೆ
ಅಂಟಿಕೊಂಡರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು
ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ
ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ….
ಈ ನಡುವೆ ಜಗತ್ತಿನ ಹಲವೆಡೆ ಔಷಧ ಸೇವನೆ ಇಲ್ಲದೇ ಮಧುಮೇಹವನ್ನು
ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬುದು
ಸಾಬೀತಾಗುತಿದೆ , ಇದನ್ನು ‘ಮಧುಮೇಹ ರಿವರ್ಸಲ್ ಥೆರಪಿ ‘ ಎಂಬುದಾಗಿ ಕರೆಯುತ್ತಾರೆ.
ಸರಿಯಾದ ಆಯುರ್ವೇದ ಔಷಧಿಯು , ಆಹಾರಕ್ರಮ, ದೈನಂದಿನ ವ್ಯಾಯಾಮ, ಕಡಿಮೆ ಮಾನಸಿಕ
ಒತ್ತಡ ಮತ್ತು ಉತ್ತಮ ನಿದ್ರೆಯಿಂದ ವ್ಯಕ್ತಿಯೊಬ್ಬರ ಆರೋಗ್ಯ ಸ್ಥಿತಿಯನ್ನು
ಮೊದಲಿನಂತೆ ತರಬಹುದು ….
ಈ ಸ್ಥಿತಿಯು ಆರಂಭಿಕ ಹಂತದಲ್ಲಿದ್ದರೆ ಮತ್ತು ಎರಡು-ಮೂರು ವರ್ಷಗಳಿಂದ
ಮಧುಮೇಹದಿಂದ ಬಳಲುತ್ತಿದ್ದರೆ, ಕೆಲವೇ ವಾರಗಳಲ್ಲಿ ಮೊದಲಿನಂತೆ
ಪರಿವರ್ತನೆಗೊಳ್ಳಬಹುದು. ಆದರೆ ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಮಧುಮೇಹದಿಂದ
ಬಳಲುತ್ತಿದ್ದರೆ ಅಂದರೆ 10, 15 ಅಥವಾ 20 ವರ್ಷಗಳಿಂದ ಬಳಲುತ್ತಿದ್ದರೆ, ಮೊದಲಿನ
ಸ್ಥಿತಿಗೆ ಆರೋಗ್ಯ ಮರಳಲು ಸಮಯ ತೆಗೆದುಕೊಳ್ಳುತ್ತದೆ… ಚಿಕಿತ್ಸೆ ಹೇಗಿರುತ್ತದೆ?
ಮಧುಮೇಹವನ್ನು ಗುಣ ಪಡಿಸಲು ರೋಗದ ಲಕ್ಷಣಕ್ಕೆ ಅನುಗುಣವಾಗಿ ಸೂಕ್ತವಾದ ಆಯುರ್ವೇದ
ಔಷಧಿ ಸೇವಿಸಬೇಕು ಮತ್ತು ಶೇ.50ರಷ್ಟು ಚಿಕಿತ್ಸೆಯು ಕಟ್ಟುನಿಟ್ಟಾದ ಆಹಾರಕ್ರಮದ
ಮೇಲಿರುತ್ತದೆ. ಉಳಿದಂತೆ ಶೇ.10 ರಷ್ಟು ದೈಹಿಕ ಚಟುವಟಿಕೆ, ಮಾನಸಿಕ ಒತ್ತಡವನ್ನು
ಕಡಿಮೆ ಮಾಡುವುದು ಮತ್ತು ಸುಮಾರು ಎಂಟು ಗಂಟೆಗಳ ಒಳ್ಳೆಯ ನಿದ್ರೆಯನ್ನು
ಅವಲಂಬಿಸಿರುತ್ತದೆ. ರೋಗಿಯು ಕಡಿಮೆ ಕಾರ್ಬೋಹೈಡ್ರೇಟ್ಸ್ ಇರುವ ಮತ್ತು
ಆರೋಗ್ಯಕರವಾಗಿರುವ ಕೊಬ್ಬಿನ ಆಹಾರವನ್ನು ಸೇವಿಸಬೇಕು…. ವೈದ್ಯಕೀಯ ಶಾಸ್ತ್ರದ ಪ್ರಕಾರ ಮಧುಮೇಹದ ಮೆಟ್ರಿಕ್ ಹೆಚ್’ಬಿಎ1ಸಿ ಎಂಬುದಾಗಿ
ಪರಿಗಣಿಸಲಾಗುತ್ತದೆ. ಅಂತೆಯೇ 6.6ಕ್ಕಿಂತ ಹೆಚ್ಚು ಎಣಿಕೆ ಹೊಂದಿರುವ ಯಾವುದೇ
ವ್ಯಕ್ತಿಯನ್ನು ಮಧುಮೇಹಿ ಎಂದು ಪರಿಗಣಿಸಲಾಗುತ್ತದೆ. ಸರಿಯಾದ ಆಹಾರಕ್ರಮದಿಂದ
ಮಧುಮೇಹವನ್ನು ಉಪಶಮನ ಮಾಡಬಹುದು. ಹೆಚ್’ಬಿಎ1ಸಿ ಮಟ್ಟವನ್ನು 5.7 ರಿಂದ 6.4 ರ
ಮಧುಮೇಹ ಪೂರ್ವ ಮಟ್ಟಕ್ಕೆ ತರಬಹುದು ಅಥವಾ 5.6 ಅಥವಾ ಅದಕ್ಕಿಂತ ಕಡಿಮೆ
ಮಟ್ಟಕ್ಕೆ ತರಬಹುದು. ಆದರೆ ಮಧುಮೇಹ ಪೀಡಿತರು ತಮ್ಮ ಆಹಾರಕ್ರಮ ಮತ್ತು
ನಿರೀಕ್ಷಿತ ದೈಹಿಕ ಚಟುವಟಿಕೆಯೊಂದಿಗೆ ಮುಂದುವರಿಯಬೇಕು. ಇಲ್ಲದಿದ್ದರೆ
ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗಲಾರದು… ನಂತರದ ದಿನಗಳಲ್ಲಿ ಯಾವುದೇ ಔಷಧಿಯನ್ನಾಗಲಿ ಚಿಕಿತ್ಸೆಯನ್ನಾಗಲಿ ಪಡೆಯುವ ಅವಶ್ಯಕತೆ
ಏರುವುದಿಲ್ಲ ಹಾಗಾಗಿ ಮಧುಮೇಹದ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ
ವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಪ್ರಚಲಿತದಲ್ಲಿರುವ ಟೈಪ್-II ಮಧುಮೇಹವು
ಈಗ ಹದಿಹರೆಯದವರು ಮತ್ತು ಯುವ ವಯಸ್ಸಿನವರನ್ನು ಬಾಕಿಮಾಡುತಿಲ್ಲ. ಕಳೆದ
ಕೆಲವು ವರ್ಷಗಳಲ್ಲಿ, 14 ರಿಂದ 25 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆಯು 20%
ಹೆಚ್ಚಳವಾಗಿದೆ. ಇದಕ್ಕೇ ಕಾರಣ ನಮ್ಮ ದೇಶದಲ್ಲಿ ಬದಲಾಗುತ್ತಿರುವ ನಮ್ಮ ಆಹಾರ
ಪದ್ಧತಿ ಮತ್ತು ಜಡ ಜೀವನಶೈಲಿ !…
ಡಾ. ನಿಶಾಂತ್ ಆರ್ನೋಜಿ
ಆಯುರ್ವೇದ ವೈದ್ಯ, ಶತಾಯು
ಆಯುರ್ವೇದ ಕ್ಲಿನಿಕ್, ಗುತ್ತಿಗಾರು