ಅರಂಬೂರಿನಲ್ಲಿ ಬೆಳ್ಳಂ ಬೆಳಗ್ಗೆ ದಿನಸಿ ಅಂಗಡಿಗೆ ಆಕಸ್ಮಿಕ ಬೆಂಕಿ

0

ಸಾಮಾಗ್ರಿಗಳು ಸಂಪೂರ್ಣ ಭಸ್ಮ-
ಅಪಾರ ಪ್ರಮಾಣದ ನಷ್ಟ

ಆಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ದಿನಸಿ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಅಂಗಡಿಯಲ್ಲಿದ್ದ ದಿನಸಿ ಸಾಮಾಗ್ರಿಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಅರಂಬೂರಿನ ಕರ್ನಾಟಕ ಪ್ಲೈವುಡ್ ಫ್ಯಾಕ್ಟರಿಯ ಎದುರಿನಲ್ಲಿ ಇರುವ ದಿವಾಕರ ಮಾಸ್ತರ್ ರವರಿಗೆ ಸೇರಿದ ಅಂಗಡಿ ಇದಾಗಿದ್ದು ಮುಂಜಾನೆ ಪೇಪರ್ ತರಲು ಬಂದ ಫ್ಯಾಕ್ಟರಿಯಲ್ಲಿರುವ ವರ್ಕರ್ಸ್ ಒಬ್ಬರು ಕಟ್ಟಡದೊಳಗಿನಿಂದ ಬೆಂಕಿಯ ಹೊಗೆಯನ್ನು ಗಮನಿಸಿದ್ದು ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದರು. ಅಂಗಡಿ ಕಟ್ಟಡದ ಹಿಂದುಗಡೆಯಲ್ಲಿಯೇ ದಿವಾಕರ ಮಾಸ್ತರ್ ರವರು ವಾಸ್ತವ್ಯ ವಿದ್ದುದರಿಂದ ಅವರಿಗೆ ವಿಷಯ ತಿಳಿಸಲಾಯಿತು. ಬಳಿಕ ಸ್ಥಳೀಯರು ಸೇರಿ ಅಂಗಡಿಯ ಎದುರಿನ ಶೆಟರನ್ನುತೆರೆಯಲು ಪ್ರಯತ್ನಿಸಿದರು.
ಅಷ್ಟು ಹೊತ್ತಿಗೆ ಬೆಂಕಿಯು ಜೋರಾಗಿ ಉರಿದು
ಒಳಗಿದ್ದ ಎಲ್ಲಾ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿತ್ತು.ವಿಷಯ ತಿಳಿದ ಸುಳ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ಥಳೀಯ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು, ಉದ್ಯಮಿ ಕೃಷ್ಣ ಕಾಮತ್, ಬಂಗಾರು ಭಾರದ್ವಾಜ್, ಹೇಮಂತ್ ಕಾಮತ್ ಹಾಗೂ ಫ್ಯಾಕ್ಟರಿ ವರ್ಕರ್ಸ್ ಮತ್ತು ಹಾಲು ಸೊಸೈಟಿಯವರು, ಸ್ಥಳೀಯರು ಸಹಕರಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಹತ್ತಿಕೊಂಡಿರಬಹುದೆಂದುಅಂದಾಜಿಸಲಾಗಿದ್ದು ಸುಮಾರು ರೂ. 8 ಲಕ್ಷಕ್ಕೂ ಮಿಕ್ಕಿ ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.