ನಮ್ಮ ನಡೆ ಮತಗಟ್ಟೆಯ ಕಡೆಗೆ ಸುಳ್ಯ ನಗರದಲ್ಲಿ ಜಾಗೃತಿ ಜಾಥಾ

0


ಎಲ್ಲರೂ ಮತದಾನದಲ್ಲಿ ಭಾಗವಹಿಸಿ : ಅರುಣ್ ಕುಮಾರ್ ಸಂಗಾವಿ


ಮತದಾನ ಪ್ರತಿಯೊಬ್ಬರ ಹಕ್ಕು : ಭವಾನಿಶಂಕರ್ ಎನ್
.

ಸುಳ್ಯ ತಾಲೂಕು ಸ್ವೀಪ್ ಸಮಿತಿ, ಸುಳ್ಯ ತಾಲೂಕು ಆಡಳಿತ, ಸುಳ್ಯ ನಗರ ಪಂಚಾಯತ್ ಇದರ ಸಹಯೋಗದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆಗೆ ಮತದಾನದ ಜಾಗೃತಿ ಕಾಲ್ನಡಿಗೆ ಜಾಥಾ ಎ.೩೦ರಂದು ಸುಳ್ಯ ನಗರದಲ್ಲಿ ನಡೆಯಿತು.


ಸುಳ್ಯ ನಗರ ಪಂಚಾಯತ್ ಆವರಣದ ಮುಂಭಾಗದಿಂದ ಆರಂಭಗೊಂಡ ಜಾಥಾಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಗಾವಿ ಚುನಾವಣಾ ಧ್ವಜ ಹಾರಿಸುವುದರೊಂದಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಮತದಾನ ಪ್ರತಿಯೊಬ್ಬರ ಹಕ್ಕು. ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರೂ ಮಾಡಿ ಎಲ್ಲರೂ ಮತದಾನ ಮಾಡಬೇಕು” ಎಂದು ಹೇಳಿದರು.


ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಮಾತನಾಡಿ ಕಳೆದ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ೮೩.೯ ಶೇ. ಮತದಾನ ಆಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಮತದಾನ ಆಗುವಂತೆ ನಾವೆಲ್ಲರೂ ಜಾಗೃತಿ ಮೂಡಿಸೋಣ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲರೂ ಸೇರಿ ಕೆಲಸ ಮಾಡಿ ಮತದಾನ ಯಶಸ್ವಿಗೊಳಿಸೋಣ” ಎಂದು ಹೇಳಿದರು.


ನಗರ ಪಂಚಾಯತ್ ಆವರಣದ ಮುಂಭಾಗದಿಂದ ಹೊರಟ ಜಾಗೃತಿ ಜಾಥಾ ಸುಳ್ಯ ನಗರದಲ್ಲಿ ಸಂಚರಿಸಿ, ರಥಬೀದಿಯಾಗಿ ಸಾಗಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು.
ಸುಳ್ಯ ತಹಶೀಲ್ದಾರ್ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕಿ ಶ್ರಿಮತಿ ರಶ್ಮಿ ಅಶೋಕ್, ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ| ನಿತೀನ್ ಪ್ರಭು, ಬಿಸಿಎಂ ಇಲಾಖಾಧಿಕಾರಿ ಗೀತಾ, ಸುಳ್ಯ ಸರಕಾರಿ ಪ.ಪೂ. ಕಾಲೇಜು ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ತಾಲೂಕಿನ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ನಗರ ಪಂಚಾಯತ್ ಸಿಬ್ಬಂದಿಗಳು ಇದ್ದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ವಂದಿಸಿದರು.